ನಟಿ ಹರಿಪ್ರಿಯ
ಸಿನಿಮಾ ಸುದ್ದಿ
ರಿಷಿಕೇಶದಲ್ಲಿ 'ಲೈಫ್ ಜೊತೆ ಒಂದು ಸೆಲ್ಫೀ' ಚಿತ್ರ ತಂಡ: ರಿವರ್ ರಾಫ್ಟಿಂಗ್'ನಲ್ಲಿ ಮಿಂಚಿದ ನಟಿ ಹರಿಪ್ರಿಯ
ಲೈಫ್ ಜೊತೆ ಒಂದು ಸೆಲ್ಫೀ ಚಿತ್ರ ತಂಡ ರಿಷಿಕೇಶದಲ್ಲಿ ಚಿತ್ರೀಕರಣ ನಡೆಸುತ್ತಿದ್ದು, ಇದೇ ಮೊದಲ ಬಾರಿಗೆ ನಟಿ ಹರಿಪ್ರಿಯ ಅವರು ಚಿತ್ರಕ್ಕಾಗಿ ವಾಟರ್ ರಾಫ್ಟಿಂಗ್ ಸಾಹಸಕ್ಕೆ ಕೈ ಹಾಕಿದ್ದಾರೆ...
ಲೈಫ್ ಜೊತೆ ಒಂದು ಸೆಲ್ಫೀ ಚಿತ್ರ ತಂಡ ರಿಷಿಕೇಶದಲ್ಲಿ ಚಿತ್ರೀಕರಣ ನಡೆಸುತ್ತಿದ್ದು, ಇದೇ ಮೊದಲ ಬಾರಿಗೆ ನಟಿ ಹರಿಪ್ರಿಯ ಅವರು ಚಿತ್ರಕ್ಕಾಗಿ ರಿವರ್ ರಾಫ್ಟಿಂಗ್ ಸಾಹಸಕ್ಕೆ ಕೈ ಹಾಕಿದ್ದಾರೆ.
ಲೈಫ್ ಜೊತೆ ಒಂದು ಸೆಲ್ಫೀ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಹಾಗೂ ಪ್ರೇಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಚಿತ್ರೀಕರಣ ರಿಷಿಕೇಶದಲ್ಲಿ ನಡೆಯುತ್ತಿದೆ. ದಾಂಡೇಲಿಯಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಿದ್ದ ಚಿತ್ರದ ತಂಡ ಚಿತ್ರೀಕರಣದ ಅನುಮತಿಗಾಗಿ ತಿಂಗಳುಗಟ್ಟಲೇ ಕಾದು ಕುಳಿತಿತ್ತು. ತಿಂಗಳು ಕಾಲ ಕಾದರೂ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಅನುಮತಿ ದೊರೆಯದ ಕಾರಣ ನಿರ್ಮಾಣಕಾರರು ಚಿತ್ರೀಕರಣವನ್ನು ರಿಷಿಕೇಶದಲ್ಲಿ ಮಾಡಲು ನಿರ್ಧರಿಸಿದ್ದರು.
ಇದರಂತೆ ಚಿತ್ರದ ಚಿತ್ರೀಕರಣ ರಿಷಿಕೇಶದಲ್ಲಿ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ನಟಿ ಹರಿಪ್ರಿಯ ಅವರು ರಿವರ್ ರಾಫ್ಟಿಂಗ್ ಸಾಹಸವನ್ನು ಮಾಡಿದ್ದಾರೆ.
ನಿಜವಾಗಿ ಹೇಳಬೇಕೆಂದರೆ ನನಗೆ ನೀರು ಎಂದರೆ ಭಯ. ರಿವರ್ ರಾಫ್ಟಿಂಗ್ ನನಗೆ ರೋಲರ್ ಕೋಸ್ಟರ್ ರೈಡ್ ಮಾಡಿದಂತಹ ಅನುಭವವನ್ನು ನೀಡಿತು. ರಿವರ್ ರಾಫ್ಟಿಂಗ್ ವೇಳೆ ಚಿತ್ರದ ನನ್ನಲ್ಲಿರುವ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದ್ದು. ರಿವರ್ ರಾಪ್ಟಿಂಗ್ ಮಾಡುವುದಕ್ಕೂ ಮುನ್ನ ನಿರ್ಮಾಪಕ ಹಾಗೂ ನಿರ್ದೇಶ ದಿನಕರ್ ತೂಗುದೀಪ ಅವರು ವೈಯಕ್ತಿಕವಾಗಿ ನಮ್ಮ ಸುರಕ್ಷತಾ ಕ್ರಮಗಳನ್ನು ನೋಡಿಕೊಂಡಿದ್ದರು. ಯಾವುದೇ ರೀತಿಯ ಸಮಸ್ಯೆಗಳು ಎದುರಾಗಬಾರದೆಂದು ರಾಫ್ಟಿಂಗ್ ಗೂ ಮೊದಲೇ ಸ್ಥಳದಲ್ಲಿ ಆ್ಯಂಬುಲೆನ್ಸ್ ಕರೆಸಲಾಗಿತ್ತು ಎಂದು ಹೇಳಿದ್ದಾರೆ.
ಸಿನಿಮಾ ಸ್ನೇಹಕ್ಕೆ ಸಂಬಂಧಿಸಿದ್ದಾಗಿದ್ದು, ಚಿತ್ರೀಕರಣದ ವೇಳೆ ಎಲ್ಲರೂ ಒಟ್ಟಾಗಿ ಸಾಹಸಕ್ಕೆ ಹಾಗೂ ಪ್ರವಾಸಕ್ಕೆ ಬಂದಿರುವಂತಿದೆ ಎಂದು ಹರಿಪ್ರಿಯ ತಿಳಿಸಿದ್ದಾರೆ.


