ನಟಿ ತಮನ್ನಾ ಭಾಟಿಯಾ
ನಟಿ ತಮನ್ನಾ ಭಾಟಿಯಾ

ಬಾಹುಬಲಿ ನಟಿ ತಮನ್ನಾ ಭಾಟಿಯಾ ಮೇಲೆ ಚಪ್ಪಲಿ ಎಸೆತ; ಒಬ್ಬನ ಬಂಧನ

ಖ್ಯಾತ ತೆಲುಗು ನಟಿ ತಮನ್ನಾ ಭಾಟಿಯಾ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆಯಲು ಯತ್ನಿಸಿದ ಘಟನೆ ಭಾನುವಾರ ನಡೆದಿದೆ...
ಹೈದರಾಬಾದ್: ಖ್ಯಾತ ತೆಲುಗು ನಟಿ ತಮನ್ನಾ ಭಾಟಿಯಾ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆಯಲು ಯತ್ನಿಸಿದ ಘಟನೆ ಭಾನುವಾರ ನಡೆದಿದೆ. 
ಹೈದರಾಬಾದ್'ನ ಚಿನ್ನಾಭರಣ ಮಳಿಗೆಯೊಂದರ ಉದ್ಘಾಟನೆಗೆ ಆಗಮಿಸಿದ್ದ ತಮನ್ನಾಗೆ ಮುಶೀರಾಬಾದ್ ನಿವಾಸಿ ಕರೀಮುಲ್ಲಾ ಎಂಬ ವ್ಯಕ್ತಿ ಚಪ್ಪಲಿ ಎಸೆದಿದ್ದಾನೆ. ಆದರೆ, ಗುರಿ ತಪ್ಪಿ ಪಕ್ಕದ ವ್ಯಕ್ತಿಗೆ ಚಪ್ಪಲಿ ಬಿದ್ದಿದೆ ಎಂದು ತಿಳಿದುಬಂದಿದೆ. 
ಮುಶೀರ್ ಬಿಟೆಕ್ ಪದವೀಧರನಾಗಿದ್ದು, ನಟಿ ಮೇಲೆ ಚಪ್ಪಲಿ ಎಸೆಯಲು ಯತ್ನ ನಡೆಸುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ತಮನ್ನಾ ಅವರ ಅಭಿನಯದ ಬಗ್ಗೆ ಆತನಿಗೆ ಆಕ್ಷೇಪಣೆ ಹೊಂದಿದ್ದ ಎನ್ನಲಾಗಿದೆ. 

X

Advertisement

X
Kannada Prabha
www.kannadaprabha.com