777 ಚಾರ್ಲಿ ಸೆಟ್ ನಲ್ಲಿ ರಾಜ್ ಬಿ ಶೆಟ್ಟಿಗೆ ಏನು ಕೆಲಸ?

ಒಂದು ಮೊಟ್ಟೆಯ ಕಥೆ ಚಿತ್ರದ ನಾಯಕ, ನಿರ್ದೇಶಕರೂ ಆದ ರಾಜ್ ಬಿ. ಶೆಟ್ಟಿ ಸದಾ ಕಾಲ ಚಿತ್ರಗಳಲ್ಲಿ ತೂಡಗಿಸಿಕೊಳ್ಳುತ್ತಾ ಚಿತ್ರೀಕರಣದಲ್ಲಿ ಬಹು ಆಸಕ್ತಿ ಹೊಂದಿದ್ದಾರೆ.
777 ಚಾರ್ಲಿ ಸೆಟ್ ನಲ್ಲಿ ರಾಜ್ ಬಿ ಶಟ್ಟಿಗೆ ಏನು ಕೆಲಸ?
777 ಚಾರ್ಲಿ ಸೆಟ್ ನಲ್ಲಿ ರಾಜ್ ಬಿ ಶಟ್ಟಿಗೆ ಏನು ಕೆಲಸ?
Updated on: 
ಬೆಂಗಳೂರು: ಒಂದು ಮೊಟ್ಟೆಯ ಕಥೆ ಚಿತ್ರದ ನಾಯಕ, ನಿರ್ದೇಶಕರೂ ಆದ ರಾಜ್ ಬಿ. ಶೆಟ್ಟಿ ಸದಾ ಕಾಲ ಚಿತ್ರಗಳಲ್ಲಿ ತೂಡಗಿಸಿಕೊಳ್ಳುತ್ತಾ ಚಿತ್ರೀಕರಣದಲ್ಲಿ ಬಹು ಆಸಕ್ತಿ ಹೊಂದಿದ್ದಾರೆ. ಇದೀಗ ಅವರು ರಕ್ಷಿತ್ ಶೆಟ್ಟಿ ನಾಯಕನಾಗಿರುವ ’777  ಚಾರ್ಲಿ’ ಚಿತ್ರದ ಸೆಟ್ ಗೆ ಭೇಟಿ ಕೊಟ್ಟಿದ್ದಾರೆ.
ಇಷ್ಟಕ್ಕೂ ’777  ಚಾರ್ಲಿಯಲ್ಲಿ ರಾಜ್ ಪಾತ್ರವೇನು ಎನ್ನುವ ಕುತೂಹಲ ಮೂಡಿದೆ. ಕಿರಣ್ ರಾಜ್ ನಿರ್ದೇಶನದ ಈ ಚಿತ್ರ ಮೈಸೂರಿನ ಶೆಡ್ಯೂಲ್ ಮುಗಿಸಿ ಇದೀಗ ಬೆಂಗಳೂರಿನಲ್ಲಿ ಚಿತ್ರೀಕರಣಕ್ಕೆ ಸಿದ್ದವಾಗಿದೆ.
ಇನ್ನು ಚಿತ್ರದಲ್ಲಿ ಮೂರು ಲ್ಯಾಬ್ರಡಾರ್ ಗಳಿದ್ದು ಅವುಗಳು ಸದಾ ನಾಯಕನೊಂದಿಗೆ ಓಡಾಡಲಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದು ರಕ್ಷಿತ್ ಶೆಟ್ಟಿ ತಮ್ಮ ಪ್ರಮ್ವತ್ ಸ್ಟುಡಿಯೋ ಮುಖೇನ ಚಿತ್ರದ ನಿರ್ಮಾಣದಲ್ಲಿ ತೊಡಗಿದ್ದಾರೆ.
ಚಿತ್ರಕ್ಕೆ ನಾಬಿನ್ ಪೌಲ್ ಸಂಗೀತವಿದೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಲಿದ್ದಾರೆ. ಏತನ್ಮಧ್ಯೆ ರಕ್ಷಿತ್ ಹಾಗೂ ರಾಜ್ ಶೆಟ್ಟಿ ತಮ್ಮ ಯೋಜನೆ ಕುರಿತಂತೆ ಮಾತುಕತೆ ನಡೆಸುತ್ತಿದ್ದು ರಕ್ಷಿತ್ ಸದ್ಯ ಅವೇನೆ ಶ್ರೀಮನ್ನಾರಾಯಣ ಮತ್ತು 777 ಚಾರ್ಲಿ ಎರಡು ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ರಾಜ್ ಶೆಟ್ಟಿ ಗುಬ್ಬಿ ಮೆಲೆ ಬ್ರಹ್ಮಾಸ್ತ್ರ ಚಿತ್ರೀಕರಣವು ಇಂದು ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com