ರಚಿತಾ ರಾಮ್
ರಚಿತಾ ರಾಮ್

ಸ್ಯಾಂಡಲ್ ವುಡ್ ಗೆ ರಚಿತಾ ರಾಮ್: 5 ವರ್ಷದ ನಂತರವೂ ನಂಬರ್ ಒನ್ ಸ್ಥಾನದಲ್ಲಿ ಗುಳಿಕೆನ್ನೆ ಬೆಡಗಿ

2013ರಲ್ಲಿ ರಚಿತಾರಾಮ್ ಕಿರುತೆರೆಯಲ್ಲಿ ಚಿರ ಪರಿಚಿತರಾಗಿದ್ದರು. ದಿನಕರ್ ತೂಗುದೀಪ ಕಣ್ಣಿಗೆ ಬಿದ್ದ ಮೇಲೆ ಆಕೆಯ ಅದೃಷ್ಟವೇ ಬದಲಾಗಿ ಹೋಯಿತು. ದರ್ಶನ್ ...
Published on
ಬೆಂಗಳೂರು: 2013ರಲ್ಲಿ ರಚಿತಾರಾಮ್ ಕಿರುತೆರೆಯಲ್ಲಿ ಚಿರ ಪರಿಚಿತರಾಗಿದ್ದರು. ದಿನಕರ್ ತೂಗುದೀಪ ಕಣ್ಣಿಗೆ ಬಿದ್ದ ಮೇಲೆ ಆಕೆಯ ಅದೃಷ್ಟವೇ ಬದಲಾಗಿ ಹೋಯಿತು.  ದರ್ಶನ್ ನಟೆನೆಯ ಬುಲ್-ಬುಲ್ ಮೂಲಕ ಕನ್ನಡ ಸಿನಿಮಾಗೆ ರಚಿತಾ ರಾಮ್ ಪಾದರ್ಪಣೆ ಮಾಡಿದರು.
5 ವರ್ಷದಲ್ಲಿ 9 ಸಿನಿಮಾಗಳಲ್ಲಿ ನಟಸಿರುವ ರಚಿತಾ ರಾಮ್ ಸ್ಯಾಂಡಲ್ ವುಡ್ ನಲ್ಲಿ ಟಾಪ್ ಒನ್ ನಟಿಯಾಗಿದ್ದಾರೆ, ಯಾವುದೇ ಅಡೆತಡೆಯಿಲ್ಲದೇ ರಚಿತಾ ರಾಮ್  5 ವರ್ಷ ಪೂರೈಸಿದ್ದಾರೆ.
ಸೀತಾರಾಮ ಕಲ್ಯಾಣ ಸಿನಿಮಾ ಸಂಬಂದ ಮಾಧ್ಯಮಗಳ ಜದೊತೆ ಮಾತನಾಡಿದ ರಚಿತಾ, ನಾನು ಕೆಲವೇ ಕೆಲವು ಸಿನಮಾಗಳಲ್ಲಿ ನಟಿಸಿದ್ದೇನೆ, ಅವೆಲ್ಲವೂ ಸ್ಮರಣೀಯವಾದಂತವು ಎಂದು ಹೇಳಿದ್ದಾರೆ.
5 ವರ್ಷದಲ್ಲಿ ಒಂದರ ಹಿಂದೆ ಒಂದು ಸಿನಿಮಾದಲ್ಲಿ ನಟಿಸಿದರು. ಜೊತೆಗೆ ಸ್ಯಾಂಡಲ್ ವುಡ್ ಪ್ರಮುಖ ಸ್ಟಾರ್ ಗಳಾದ ದರ್ಶನ್, ಸುದೀಪ್, ಪುನೀತ್,  ಶ್ರೀಮುರುಳಿ, ಗಣೇಶ್, ಧ್ರುವ ಸರ್ಜಾ, ರಮೇಶ್ ಅರವಿಂದ್ ಸೇರಿದಂತೆ ಹಲವು ನಟರ ಜೊತೆ ಅಭಿನಯಿಸಿದ್ದಾರೆ.
ಸದ್ಯ ರಚಿತಾ ತುಂಬಾ ಬ್ಯುಸಿ ಆಗಿದ್ದಾರೆ,  ನೀನಾಸಂ ಸತೀಶ್ ಜೊತೆ ಅಯೋಗ್ಯ,  ಪುನೀತ್ ಜೊತೆ ನಟ ಸಾರ್ವಭೌಮಸ ಉಪೇಂದ್ರ ಜೊತೆ ಐ ಲವ್ ಯೂ, ನಿಖಿಲ್ ಕುಮಾರ್ ನಟನೆಯ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 
ದೊಡ್ಡ ಬ್ಯಾನರ್ ಗಳಲ್ಲಿ ಹಾಗೂ ಸ್ಟಾರ ನಟರುಗಳ ಜೊತೆ ನಟಿಸಲು ನಾನು ತುಂಬಾ ಅದೃಷ್ಟ ಮಾಡಿದ್ದೆ ಎಂದು ರಚಿತಾ ತಿಳಿಸಿದ್ದಾರೆ,
ಮತ್ತೆ ಈ ನಟರುಗಳ ಜೊತೆ ಅಭಿನಯಿಸಲು ಅವಕಾಶ ಬೇಕು ಎಂದು ಹೇಳಿರುವ ಅವರು, ಮೊದಲು ಸ್ಟಾರ್ ನಟರುಗಳ ಜೊತೆ ನಟಿಸುವಾಗ ಸಂದಿಗ್ಥತೆಯಿತ್ತು, ಈಗ ಅದೆಲ್ಲ ದೂರವಾಗಿದೆ, ಅವರ ಜೊತೆ ಕೆಲಸ ಮಾಡುವುದು ಸದ್ಯ ಈಸಿಯಾಗಿದೆ. ಎರಡನೇ ಬಾರಿಗೆ ನಾನು ಅಪ್ಪು ಜೊತೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ,
ಸೀತಾರಾಮ ಕಲ್ಯಾಣದಲ್ಲಿ ನಟಿಸುತ್ತಿರುವ ರಚಿತಾ ರಾಮ್, ಇದೊಂದು ಜುಗಲ್ ಬಂದಿ ಸೆಟ್ ಆಗಿದೆ, ಪ್ರತಿಯೊಬ್ಬರು ಉತ್ತಮವಾದದ್ದನ್ನೇ ನೀಜಲು ಬಯಸಿದ್ದಾರೆ, ಭವಿಷ್ಯದ ಮುಂದಿನ ಪ್ರಾಜೆಕ್ಟ್ ಗಳಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸುವುದಾಗಿ ಹೇಳಿದ್ದಾರೆ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಬೇಕೆಂಬ ಬಯಕೆ ಹೊಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com