ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್

'ನಟಸಾರ್ವಭೌಮ' ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ದಸರಾ ಗಿಪ್ಟ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರವನ್ನು ದಸರಾ ವೇಳೆಯಲ್ಲಿ ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡದ್ದಾಗಿದೆ. ಪುನೀತ್ ರಾಜ್ ಕುಮಾರ್ ಮುಂದಿನ ಚಿತ್ರ ವೀಕ್ಷಣೆಗಾಗಿ ಕಾಯುತ್ತಿರುವ ಅವರ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿಯಾಗಿದೆ.
Published on

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ  ಚಿತ್ರದ  ಚಿತ್ರೀಕರಣ ಭರದಿಂದ ಸಾಗಿರುವಂತೆ  ಚಿತ್ರ ಬಿಡುಗಡೆಗೆ   ಸ್ವಲ್ಪ ವಿರಾಮ ಪಡೆದುಕೊಂಡಿದೆ. ದಸರಾ ಗಿಪ್ಟ್ ಆಗಿ ಈ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರು ಗುರಿ ಹಾಕಿಕೊಂಡಿರುವುದು  ವಿರಾಮಕ್ಕೆ ಕಾರಣ ಎನ್ನಲಾಗಿದೆ.

ಪವನ್ ಒಡೆಯರ್ ನಿರ್ದೇಶನದ ರಾಕ್ ಲೈನ್  ವೆಂಕಟೇಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು  ದಸರಾ ವೇಳೆಯಲ್ಲಿ ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡದ್ದಾಗಿದೆ. ಪುನೀತ್ ರಾಜ್ ಕುಮಾರ್ ಮುಂದಿನ ಚಿತ್ರ ವೀಕ್ಷಣೆಗಾಗಿ ಕಾಯುತ್ತಿರುವ ಅವರ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿಯಾಗಿದೆ.

ಚಿತ್ರತಂಡ ಪ್ರಸ್ತುತ ಬಾದಾಮಿಯಲ್ಲಿ ದ್ದು ಕಳೆದ ನಾಲ್ಕು ದಿನಗಳಿಂದ ಚಿತ್ರೀಕರಣದಲ್ಲಿ ತೊಡಗಿದೆ. ಚಿತ್ರದ ಕೆಲ  ದೃಶ್ಯಗಳು ಹಾಗೂ ಸಾಹಸವನ್ನು ಇಲ್ಲಿ ಚಿತ್ರೀಕರಣಗೊಳಿಸಿಕೊಂಡು  ಬೆಂಗಳೂರಿಗೆ ವಾಪಾಸ್ ಆಗಲಿದೆ. ತದನಂತರ ಶೂಟಿಂಗ್ ಮುಂದುವರೆಯಲಿದೆ.

ಬೆಂಗಳೂರಿನಲ್ಲಿ ಆಗಸ್ಟ್ 10ರ ವರೆಗೂ ಶೂಟಿಂಗ್ ನಡೆಯಲಿದೆ. ನಂತರ ಚಿತ್ರದ ಬಹುಮುಖ್ಯ ಭಾಗದ ಚಿತ್ರೀಕರಣಕ್ಕಾಗಿ ಚಿತ್ರತಂಡ ಕೊಲ್ಕತ್ತಾಕ್ಕೆ ಪ್ರಯಾಣ ಬೆಳೆಸಲಿದೆ. ಸೆಪ್ಟೆಂಬರ್ ಮಧ್ಯಭಾಗದಲ್ಲಿ ಮೊದಲ ಕಾಫಿ  ಹೊರಬರಲಿದ್ದು, ಅಕ್ಟೋಬರ್ 5 ರಂದು ಚಿತ್ರ ಬಿಡುಗಡೆ ಮಾಡುವ ಉದ್ದೇಶ ಪವನ್  ಒಡೆಯರ್ ಅವರದ್ದಾಗಿದೆ ಎಂದು ಅನುಪಮ ಪರಮೇಶ್ವರ್ ತಿಳಿಸಿದರು.

ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್  ಪತ್ರಕರ್ತರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೊಂದಿಗೆ ರಚಿತಾ ರಾಮ್ ಮತ್ತು ಅನುಪಮ ಪರಮೇಶ್ವರ್  ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ.
ಅನುಪಮ ಪರಮೇಶ್ವರ್  ವಕೀಲೆ ವೃತ್ತಿಯಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ರವಿಶಂಕರ್, ಪ್ರಭಾಕರ್, ಚಿಕ್ಕಣ್ಣ ಮತ್ತಿತರರು ಚಿತ್ರದಲ್ಲಿದ್ದಾರೆ. ಸರೋಜಾ ದೇವಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,  ಡಿ ಇಮ್ಮಾನ್ ಸಂಗೀತ ಸಂಯೋಜಿಸುತ್ತಿದ್ದು, ವೈದೈ ಅವರ ಛಾಯಾಗ್ರಹಣವಿರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com