ನಟಿ ರಾಧಿಕಾ ಪಂಡಿತ್ ಗೆ ಈ ದಿನ ಅತ್ಯಂತ ವಿಶೇಷ, ಏಕೆ ಗೊತ್ತಾ?

ಕನ್ನಡದ ಪ್ರತಿಭಾವಂತ ನಟಿ ಎನಿಸಿಕೊಂಡಿರುವ ರಾಧಿಕಾ ಪಂಡಿತ್ ಅವರಿಗೆ ಇಂದು ವಿಶೇಷ ದಿನ. ಅದು ...
ರಾಧಿಕಾ ಪಂಡಿತ್
ರಾಧಿಕಾ ಪಂಡಿತ್
Updated on: 

ಕನ್ನಡದ ಪ್ರತಿಭಾವಂತ ನಟಿ ಎನಿಸಿಕೊಂಡಿರುವ ರಾಧಿಕಾ ಪಂಡಿತ್ ಅವರಿಗೆ ಇಂದು ವಿಶೇಷ ದಿನ. ಅದು ಅವರು ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ದಿನವಿಂದು.

2008, ಜುಲೈ 18ರಂದು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಇಂದಿಗೆ 10 ವರ್ಷ ಪೂರೈಸಿದ್ದಾರೆ. ಈ ಸಂತೋಷವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

''ಸಿನಿಮಾ ನಟಿಯರ ವೃತ್ತಿಜೀವನ ಕ್ಷಣಿಕ ಎನ್ನುತ್ತಾರೆ. ಆದರೆ 10 ವರ್ಷ ಈ ಚಿತ್ರರಂಗದಲ್ಲಿ ಕಳೆದದ್ದು ಸಾಮಾನ್ಯ ವಿಷಯವಲ್ಲ, ಈ ಕ್ಷೇತ್ರದಲ್ಲಿ ಬದುಕುಳಿಯುವುದು ಮಾತ್ರವಲ್ಲಗೆ ಗುರುತಿಸಿಕೊಂಡಿದ್ದೇನೆ, ಅದಕ್ಕೆ ಕಾರಣ ನೀವು ಅಭಿಮಾನಿಗಳು ತೋರಿಸಿದ ಪ್ರೀತಿ ಮತ್ತು ನನ್ನ ಕುಟುಂಬದವರು ಮುಖ್ಯವಾಗಿ ಪ್ರತಿ ದಿನ ಶೂಟಿಂಗ್ ನಲ್ಲಿ ನನ್ನ ಜೊತೆ ಇದ್ದ ತಾಯಿ.

ಇಷ್ಟು ವರ್ಷಗಳಿಂದ ನನ್ನ ಮೇಲೆ ನಂಬಿಕೆಯಿಟ್ಟ ನಿರ್ದೇಶಕರುಗಳು, ನಿರ್ಮಾಪಕರು ಮತ್ತು ಕೆಲಸ ಸುಲಭ ಮಾಡಲು ಸಹಕರಿಸಿದ ತಂತ್ರಜ್ಞರಿಗೆ ಕೃತಜ್ಞತೆಗಳು''  ಎಂದಿರುವ ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಬರುವ ಕಿರಿಯ ಕಲಾವಿದರಿಗೆ ಉತ್ತಮ ಕಲಾವಿದರಾದರೆ ಸಾಲದು, ಉತ್ತಮ ವ್ಯಕ್ತಿಯಾಗಬೇಕು ಎಂಬ ಕಿವಿಮಾತುಗಳನ್ನು ಕೂಡ ಹೇಳಿದ್ದಾರೆ.

ಇನ್ನು ಮುಂದೆ ಕೂಡ ಚಿತ್ರರಂಗದಲ್ಲಿ ಮುಂದುವರಿಯುವುದಾಗಿ ಅಭಿಮಾನಿಗಳಿಗೆ ರಾಧಿಕಾ ಪಂಡಿತ್ ಖುಷಿಯ ವಿಚಾರ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com