ವೇದಿಕೆ ಮೇಲೆ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಕಣ್ಣೀರು ಹಾಕಿದ್ದು ಯಾಕೆ ಗೊತ್ತ!

ಕನ್ನಡ ಖ್ಯಾತ ನಿರೂಪಕಿ ಅನುಶ್ರೀ ಅವರು ರಿಯಾಲಿಟಿ ಶೋವೊಂದರ ವೇದಿಕೆ ಮೇಲೆ ಕಣ್ಣೀರು ಹಾಕಿದ ಘಟನೆ ನಡೆದಿದೆ...
ಅನುಶ್ರೀ
ಅನುಶ್ರೀ
Updated on
ಬೆಂಗಳೂರು: ಕನ್ನಡ ಖ್ಯಾತ ನಿರೂಪಕಿ ಅನುಶ್ರೀ ಅವರು ರಿಯಾಲಿಟಿ ಶೋವೊಂದರ ವೇದಿಕೆ ಮೇಲೆ ಕಣ್ಣೀರು ಹಾಕಿದ ಘಟನೆ ನಡೆದಿದೆ. 
ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಕಾರ್ಯಕ್ರಮದ ನಿರೂಪಣೆ ಮಾಡುವ ಅನುಶ್ರೀ ಅವರು ನಿನ್ನೆಯ ಸಂಚಿಕೆಯಲ್ಲಿ ತಮ್ಮ ಸಹೋದರನನ್ನು ನೆನಪಿಸಿಕೊಂಡು ಭಾವುಕರಾದರು. 
ಸ್ಪರ್ಧಿಗಳಾದ ಸೂರಜ್, ಶ್ರಾವ್ಯ ಮತ್ತು ಡ್ಯಾನ್ಸ್ ಮಾಸ್ಟರ್ ರುದ್ರ ಮೂವರು ಜಾಲಿಡೇಸ್ ಚಿತ್ರದ ಸ್ನೇಹತ್ವ ಸಾರುವ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ವೇಳೆ ತೀರ್ಪುಗಾರರ ನೆಚ್ಚಿನ ಸ್ನೇಹಿತರ ಫೋಟೋ ಸಹ ತೋರಿಸಿದರು. ನಟ ವಿಜಯ್ ರಾಘವೇಂದ್ರರ ಗೆಳೆಯ ಕುಮಾರ್,  ರಕ್ಷಿತಾರ ಸ್ನೇಹಿತೆ ಪ್ರಶಾಂತಿ, ಅರ್ಜುನ್ ಜನ್ಯರ ಗೆಳೆಯ ಪ್ರಕಾಶ್ ಎಲ್ಲರ ಫೋಟೋಗಳನ್ನು ಡಿಸ್ ಪ್ಲೇ ಮಾಡಿದರು. ಕೊನೆಗೆ ನಿರೂಪಕಿ ಆಗಿರುವ ಅನುಶ್ರೀ ಅವರ ಫ್ರೆಂಡ್ ಬದಲಾಗಿ ತಮ್ಮ ಅಭಿಜಿತ್ ಫೋಟೋ ತೋರಿಸಲಾಯಿತು. 
ತಮ್ಮ ಸಹೋದರನ ಫೋಟೋ ನೋಡಿ ಭಾವುಕರಾದ ಅನುಶ್ರೀ ಅವರು ತುಂಬಾ ವರ್ಷಗಳ ಹಿಂದೆ ಕೆಲಸಕ್ಕಾಗಿ ನಾನು ಬೆಂಗಳೂರಿಗೆ ಬಂದೆ. ನಾನು ಇಲ್ಲಿ ದುಡಿಯುತ್ತಿದ್ದರೆ ಅಲ್ಲಿ ನನ್ನ ತಮ್ಮ ನನ್ನ ತಾಯಿಯನ್ನು 13 ವರ್ಷಗಳಿಂದ ಚೆನ್ನಾಗಿ ನೋಡಿಕೊಂಡಿದ್ದಾನೆ. ನಾನು ಏನು ಮಾಡಲು ಸಾಧ್ಯವಾಗಿಲ್ಲವೋ, ಅವೆಲ್ಲವನ್ನು ಅವನು ಮಾಡಿದ್ದಾನೆ. ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದು ಒಳ್ಳೆಯ ಕೆಲಸ ಸಂಪಾದಿಸಿಕೊಂಡಿದ್ದಾನೆ. ದೇವರು ನನಗೆ ನೀಡಿರುವ ಎಲ್ಲ ಆಯಸ್ಸನ್ನು ಆತನಿಗೆ ನೀಡಲಿ ಎಂದು ಕೇಳಿಕೊಂಡು ಭಾವುಕರಾದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com