ಆ್ಯಮಿ ಜಾಕ್ಸನ್ ಪಾಲಿಗೆ ನಿರ್ದೇಶಕ ಪ್ರೇಮ್ 'ಸ್ವೀಟ್ ಹಾರ್ಟ್'!

ಅಂತೂ ಇಂತು ಪ್ರೇಮ್ ನಿರ್ದೇಶನದ ವಿಲ್ಲನ್ ಸಿನಿಮಾ ಶೂಟಿಂಗ್ ಆ್ಯಮಿ ಜಾಕ್ಸನ್ ನಟನೆಯ ಹಾಡಿನೊಂದಿಗೆ ಮುಕ್ತಾಯವಾಗಿದೆ....
ವಿಲ್ಲನ್ ಚಿತ್ರ ತಂಡ
ವಿಲ್ಲನ್ ಚಿತ್ರ ತಂಡ
ಬೆಂಗಳೂರು: ಅಂತೂ ಇಂತು ಪ್ರೇಮ್ ನಿರ್ದೇಶನದ ವಿಲ್ಲನ್ ಸಿನಿಮಾ ಶೂಟಿಂಗ್ ಆ್ಯಮಿ ಜಾಕ್ಸನ್ ನಟನೆಯ ಹಾಡಿನೊಂದಿಗೆ ಮುಕ್ತಾಯವಾಗಿದೆ.
ಭಾನುವಾರ ರಾತ್ರಿ ಸುದೀಪ್ ಮತ್ತು ಆ್ಯಮಿ ಜಾಕ್ಸನ್  ಹಾಡಿಗೆ ಹೆಜ್ಜೆ ಹಾಕಿದ್ದಾರೆ, ಕೊನೆಯ ಹಂತದ ಶೂಟಿಂಗ್ ಮುಗಿದಿದ್ದು, ಚಿತ್ರತಂಡಕ್ಕೆ ಪ್ರೇಮ್ ಧನ್ಯವಾದ ಅರ್ಪಿಸಿದ್ದಾರೆ.
ಇನ್ನೂ ಆ್ಯಮಿ ಜಾಕ್ಸನ್ ಕೂಡ ಸೋಷಿಯಲ್ ಮೀಡಿಯಾದಲ್ಲಿ  ಸಿನಿಮಾ ಶೂಟಿಂಗ್ ಮುಕ್ತಾಯವಾಗಿರುವುದರ ಬಗ್ಗೆ ಬರೆದುಕೊಂಡಿದ್ದಾರೆ,  70 ದಿನಗಳ ಶೂಟಿಂಗ್ ಅಂತ್ಯ ಎಂದು ಹೇಳಿರುವ ಆ್ಯಮಿ ನಿರ್ದೇಶಕ ಪ್ರೇಮ್ ಅವರನ್ನು ಸ್ವೀಟ್ ಹಾರ್ಟ್ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಇಡೀ ಚಿತ್ರತಂಡಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರೇಮ್. ಥ್ಯಾಂಕ್ಯೂ ಆ್ಯಮಿ ಜಾಕ್ಸನ್, ಶೂಟಿಂಗ್ ಉದ್ದಕ್ಕೂ ನೀವು ವೃತ್ತಿಪರವಾಗಿದ್ದೀರಿ ಹಾಗೂ ಶಿಸ್ತಿನಿಂದ ಇದ್ದೀರಿ, ನಿಮ್ಮ ಜೊತೆ ಕೆಲಸ ಮಾಡಿದ ಅನುಭವ ಚೆನ್ನಾಗಿತ್ತು, ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮತ್ತೆ ಭೇಟಿಯಾಗೋಣ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com