ಪೌರಾಣಿಕ ವೇಷ ತೊಟ್ಟ 'ನವರಸ ನಾಯಕ' ಜಗ್ಗೇಶ್; ಯಾಕಂತೀರಾ, ಇಲ್ಲಿದೆ ನೋಡಿ

ನವರಸನಾಯಕ ಜಗ್ಗೇಶ್ ಪೌರಾಣಿಕ ವೇಷ ತೊಟ್ಟಿದ್ದಾರೆ. ಏನು ಅವರು ಪೌರಾಣಿಕ ಸಿನಿಮಾ ಮಾಡಲು ...
ನಟ ಜಗ್ಗೇಶ್
ನಟ ಜಗ್ಗೇಶ್
Updated on: 

ನವರಸನಾಯಕ ಜಗ್ಗೇಶ್ ಪೌರಾಣಿಕ ವೇಷ ತೊಟ್ಟಿದ್ದಾರೆ. ಏನು ಅವರು ಪೌರಾಣಿಕ ಸಿನಿಮಾ ಮಾಡಲು ಹೊರಟಿದ್ದಾರೆಯೇ ಎಂಬ ಪ್ರಶ್ನೆ ಮೂಡುವುದು ಸಹಜ, ಇಲ್ಲ ಅವರು ಇಂತಹ ವೇಷ ತೊಟ್ಟಿರುವುದು ತಮ್ಮ ಮೊಮ್ಮಗನಿಗಾಗಿ.

ಮೊಮ್ಮಕ್ಕಳ ಜೊತೆ ಆಟವಾಡುವುದು, ಕಾಲಕಳೆಯುವುದೆಂದರೆ ಯಾವ ಅಜ್ಜಿ, ತಾತಂದಿರಿಗೆ ಇಷ್ಟವಾಗುವುದಿಲ್ಲ ಹೇಳಿ? ಇಳಿವಯಸ್ಸಿನಲ್ಲಿ ತಮ್ಮ ನೋವು, ತಾಪತ್ರಯಗಳೆಲ್ಲಾ ಮೊಮ್ಮಕ್ಕಳ ಜೊತೆ ಕಳೆದು ಮರೆತುಬಿಡುತ್ತಾರೆ.

ಸದಾ ಸಿನಿಮಾ ಶೂಟಿಂಗ್, ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ಎಂದು ಬ್ಯುಸಿಯಾಗಿಬಿಡುವ ಜಗ್ಗೇಶ್ ವಾರಾಂತ್ಯದಲ್ಲಿ ತಮ್ಮ ವೈಯಕ್ತಿಕ ಸುಖ, ಸಂತೋಷಕ್ಕೆಂದು ಸಮಯ ಮೀಸಲಿಡುತ್ತಾರೆ. ಈ ಸಮಯದಲ್ಲಿ ಪತ್ನಿ, ಮಕ್ಕಳು, ಮೊಮ್ಮಗನೊಂದಿಗೆ ಕಾಲ ಕಳೆಯುವುದು ಹೆಚ್ಚು.

ಸಿನಿಮಾದಲ್ಲಿ ಒಂದಿಲ್ಲೊಂದು ವೇಷ ತೊಡುವ ಜಗ್ಗೇಶ್ ನಿನ್ನೆ ತಮ್ಮ ಮೊಮ್ಮಗನನ್ನು ಖುಷಿಪಡಿಸಲು ಪೌರಾಣಿಕ ವೇಷ ತೊಟ್ಟಿದ್ದರು. ಈ ವೇಷದಲ್ಲಿ ನನ್ನ ಮೊಮ್ಮಗ ಅರ್ಜುನ ನನ್ನನ್ನು ಎಂದೂ ಕಂಡಿರಲಿಲ್ಲ, ಇದೆಲ್ಲ ಅವನ ಖುಷಿಗಾಗಿ ಎಂದು ಜಗ್ಗೇಶ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಬೆಂಗಳೂರು ಸಿಟಿಯ ಯಾಂತ್ರೀಕೃತ ಬದುಕಿನಲ್ಲಿ ಮಕ್ಕಳು, ಮೊಮ್ಮಕ್ಕಳು ಹಠ ಮಾಡಿದಾಗ ಮೊಬೈಲ್, ಐಫೋನ್, ಐಪ್ಯಾಡ್ ಅವರ ಕೈಗೆ ನೀಡಿ ಬಾಯಿಮುಚ್ಚಿಸುವವರೇ ಅಧಿಕ ಮಂದಿ. ಇನ್ನು ಕೆಲವರು ಪಾರ್ಕಿಗೊ, ಮಾಲ್ ಗೊ ಕರೆದುಕೊಂಡು ಹೋಗಿ ಸಿಕ್ಕಿದ್ದನ್ನೆಲ್ಲಾ ಕೊಡಿಸುತ್ತಾರೆ. ಅಂತಹದ್ದರಲ್ಲಿ ಮನೆಯಲ್ಲಿಯೇ ವಿಭಿನ್ನವಾಗಿ ಮೊಮ್ಮಗನೊಂದಿಗೆ ಕಾಲ ಕಳೆದ ಜಗ್ಗೇಶ್ ಅವರ ಈ ಕ್ರಮ ಅನುಕರಣೀಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com