ಇಳಯರಾಜ, ಮಣಿರತ್ನಂಗೆ ಹುಟ್ಟುಹಬ್ಬದ ಸಂಭ್ರಮ : 11 ಚಿತ್ರಗಳ 11 ಗೀತೆಗಳಿಗೂ ಇವರಿಬ್ಬರೂ ಜೊತೆ

ಸಂಗೀತಗಾರ ಇಳಯರಾಜ ಮತ್ತು ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಇಳಯ ರಾಜ,  ಮಣಿರತ್ನಂ
ಇಳಯ ರಾಜ, ಮಣಿರತ್ನಂ
Updated on

ಚೆನ್ನೈ: ಭಾರತೀಯ ಸಿನಿಮಾಗಳ ಮೆಚ್ಚಿನ ಕಲಾಕಾರರು, ಸಂಗೀತಗಾರ ಇಳಯರಾಜ ಮತ್ತು ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸಂಗೀತ ಸಂಯೋಜನೆಗಾಗಿ ಐದು ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿರುವ  ಇಳಯರಾಜ ಜೂನ್ 2, 1943 ರಲ್ಲಿ  ಜ್ಞಾನತೇಸಿಕನ್  ಆಗಿ  ಜನಿಸಿದರು

ನಾಯಗನ್ ನಂತಹ ಥ್ರಿಲ್ಲಿಂಗ್ , ತಂತ್ರಜ್ಞಾನ ಆಧಾರಿತ ಚಿತ್ರಗಳ  ಮುಖ್ಯವಾಹಿನಿಗೆ ತಂದ ಮಣಿರತ್ನಂ  ಜೂನ್.2 1956 ರಂದು ಜನಿಸಿದ್ದರು. ಕನ್ನಡದ ಪಲ್ಲವಿ ಅನು ಪಲ್ಲವಿ ಚಿತ್ರದ ಮೂಲಕ ಇಬ್ಬರು ದಿಗ್ಗಜರು  ಒಂದಾದದರು. ಈ ಯಶಸ್ವಿ ಜೋಡಿ 1991 ರ  ಸೂಪರ್ ಹಿಟ್  ದಳಪತಿಯವರೆಗೂ ಮುಂದುವರೆಯಿತು.

11 ಚಿತ್ರಗಳ  , 11 ಗೀತೆಗಳಿಗೂ ಇವರಿಬ್ಬರೂ ಜೊತೆಯಲ್ಲಿಯೇ ಕೆಲಸ ಮಾಡಿದ್ದಾರೆ. ಈ ಜೋಡಿಯ ಪ್ರಮುಖ ಚಿತ್ರಗಳು  ಇಂತಿವೆ.

1. ಪಲ್ಲವಿ ಅನುಪಲ್ಲವಿ  ( 1983)

ಮಣಿರತ್ನಂ ನಿರ್ದೇಶಿಸಿದ ಕನ್ನಡದ ಪಲ್ಲವಿ ಅನುಪಲ್ಲವಿ ಚಿತ್ರಕ್ಕೆ ಇಳಯರಾಜ ಸಂಗೀತ ಸಂಯೋಜನೆ ಮಾಡಿದ್ದರೆ,  ಅನಿಲ ಕಪೂರ್  ಅವರ ಚೊಚ್ಚಲ  ಕನ್ನಡ ಚಿತ್ರವಾಗಿದ್ದು, ಅವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತ್ತು.

2. ಉನಾರೋ (1984)
ಮಣಿರತ್ನಂ ಈ ಚಿತ್ರವನ್ನು ಮಲಯಾಳಂನಲ್ಲಿ ನಿರ್ದೇಶಿಸಿದ್ದರು. ಮೋಹನ್ ಲಾಲ್ ಹಾಗೂ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ಮೋಹನ್ ಲಾಲ್   ಮಣಿರತ್ನಂ ಅವರ  ಇರುವರ್ ಚಿತ್ರದಲ್ಲೂ ಅಭಿನಯಿಸಿದ್ದರು.

ತದನಂತರ  ಪಾಗಲ್ ನಿಲಾವೂ (1985)  ಇದಾಯ ಕೊವಿಲ್ (1985)  ಮೌನ ರಾಗಮ್ (1986)  ನಾಯಗನ್ (1987) ಚಿತ್ರದಲ್ಲಿ ಹೃದಯ ಮಿಡಿಯುವ ಇಳಿಯರಾಜ ಸಂಗೀತ, ಕಮಲ್ ಹಾಸನ್ ಅದ್ಬುತವಾಗಿ ನಟನೆಯಿಂದ ಉತ್ತಮ ಹೆಸರು ತಂದುಕೊಟ್ಟಿತ್ತು. ಅಗ್ನಿ ನಾಚತೈರಮ್ (1988) ಗೀತಾಂಜಲಿ ( 1989) ಅಂಜಲಿ (1990) ಛತ್ರೀಯನ್ (1990) ದಳಪತಿ (1991)ಯವರೆಗೂ ಈ ಜೋಡಿ ಸಾಕಷ್ಟು ಉತ್ತಮ ಚಿತ್ರಗಳನ್ನು ನೀಡಿತ್ತು.

ಆದರೆ, ದಳಪತಿ ನಂತರ  ಮಣಿರತ್ನಂ ಎ.ಆರ್. ರೆಹಮಾನ್ ಜೊತೆಗೆ ಚಿತ್ರ ಮಾಡಲು ಆರಂಭಿಸಿದರು. ಇಳಯರಾಜ ಬಿಟ್ಟರೆ  ರೆಹಮಾನ್ ಜೊತೆ ಮಾತ್ರ  ಮಣಿರತ್ನಂ ಚಿತ್ರ ಮಾಡಿದ್ದಾರೆ. ಉಳಿದ ಯಾರೊಂದಿಗೂ ಚಿತ್ರ ಮಾಡಿಲ್ಲ.
 






Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com