ಕೌಟುಂಬಿಕ ಕಲಹ ವಿರುದ್ಧ ಕಿರುಚಿತ್ರದಲ್ಲಿ ಶೃತಿ ಹರಿಹರನ್ ಧ್ವನಿ

ಮಹಿಳಾ ಕೇಂದ್ರಿತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ನಟಿ ಶೃತಿ ಹರಿಹರನ್ ಅವರ ಮುಂದಿನ ಕಿರುಚಿತ್ರ ರೀಟಾದಲ್ಲಿ ಕೌಟುಂಬಿಕ ಕಲಹ ಪ್ರಕರಣಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಕಲಾತ್ಮಕ ಪ್ರೋಡಕ್ಷನ್ ಅಡಿಯಲ್ಲಿ ಶೃತಿ ಹರಿಹರನ್ ನಿರ್ಮಿಸಿರುವ ಎರಡನೇ ಕಿರುಚಿತ್ರ ಇದಾಗಿದೆ.
ಶೃತಿ ಹರಿಹರನ್
ಶೃತಿ ಹರಿಹರನ್

ಮಹಿಳಾ ಕೇಂದ್ರಿತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ನಟಿ ಶೃತಿ ಹರಿಹರನ್  ಅವರ ಮುಂದಿನ ಕಿರುಚಿತ್ರ ರೀಟಾದಲ್ಲಿ  ಕೌಟುಂಬಿಕ ಕಲಹ ಪ್ರಕರಣಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಕಲಾತ್ಮಕ ಪ್ರೋಡಕ್ಷನ್ ಅಡಿಯಲ್ಲಿ ಶೃತಿ ಹರಿಹರನ್  ನಿರ್ಮಿಸಿರುವ   ಎರಡನೇ ಕಿರುಚಿತ್ರ ಇದಾಗಿದೆ.

ಲಾಸ್ಟ್ ಕನ್ನಡಿಗ ನಂತರ  ದಾಂಪತ್ಯದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಅಥವಾ ದೌರ್ಜನ್ಯ ಪ್ರಕರಣ ವಿಷಯವನ್ನಿಟ್ಟುಕೊಂಡು ರೀಟಾ ಕಿರುಚಿತ್ರ ನಿರ್ಮಿಸಿರುವ  ಶೃತಿ ಹರಿಹರನ್ ,ಕಲೆಯಿಂದ ಜೋರಾಗಿ ಮಾತನಾಡಬಹುದು ಹಾಗೂ ಮನರಂಜನೆ ನೀಡಬಹುದು ಎಂಬುದು ನನ್ನ ನಂಬಿಕೆಯಾಗಿದೆ. ಬದಲಾವಣೆ ತರುವಲ್ಲಿ ಕಲೆ  ಒಂದು ಪ್ರಮುಖವಾದ ಪಾತ್ರ ವಹಿಸುತ್ತದೆ ಎನ್ನುತ್ತಾರೆ.
ರಚನ್ ರಾಮಚಂದ್ರನ್  ಈ  ಚಿತ್ರವನ್ನು ನಿರ್ದೇಶಿಸಿದ್ದು, ನಟರಾದ ಅಭಿನವ್ ರಾಜ್, ಶ್ರೇಯ ಅಂಚನ್ ಮತ್ತು  ನಟಿ ರೂಪಾ ನಟರಾಜ್ ಅಭಿನಯಿಸಿದ್ದಾರೆ. ಅನೂಪ್ ಸೀಳನ್ ಸಂಗೀತ ಸಂಯೋಜಿಸಲಿದ್ದು, ಕಾರ್ತಿಕ್ ಬಿ ಮಾಲೂರು ಅವರ ಛಾಯಾಗ್ರಹಣವಿರಲಿದೆ.
ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಚಿತ್ರ ಬಿಡುಗಡೆ ಮಾಡಲು ಶೃತಿ ಯೋಚಿಸಿದ್ದಾರೆ. ಈ ವರ್ಷದಲ್ಲಿ ನಾನೂ ಸಿನಿಮಾದಲ್ಲಿ ಅಭಿನಯಿಸದಿದ್ದರೂ ಇದು ನನ್ನ ಮೊದಲ ಬಿಡುಗಡೆಯ ಚಿತ್ರವಾಗಿದೆ. ಚಿತ್ರ ನಿರ್ಮಾಣ ಮಾಡುವ ಅವಕಾಶ ನನ್ನಗೆ ದೊರೆತಿದೆ ಎಂದು ಶೃತಿ ಹೇಳಿದ್ದಾರೆ.
ರೀಟಾ ಟ್ರೈಲರ್ ನಲ್ಲಿನ ಕೊನೆಯ ಸಂಭಾಷಣೆ ಅರ್ಥಪೂರ್ಣವಾಗಿದೆ.  ಎಲ್ಲ ಮನುಷ್ಯರು ವೈಯಕ್ತಿಕವಾಗಿ ನೋವು , ದು:ಖ ಅನುಭವಿಸುತ್ತಾರೆ. ಇಂತಹುದೇ ಈ ಚಿತ್ರದ ಪ್ರಮುಖ ಅಂಶವಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com