ಸ್ಯಾಂಡಲ್ ವುಡ್ ನ ಖ್ಯಾತ ನಟರ್ ಜತೆ ಅಭಿನಯಿಸಬೇಕೆಂದು ಸದಾ ಹಂಬಲಿಸುತ್ತಿದ್ದ ಶ್ರೀಲೀಲಾ ಶ್ರೀಮುರಳಿಯೊಡನೆ ತೆರೆಯ ಮೇಲೆ ಕಾಣಿಸಿಕೊಳ್ಳಬೇಕೆಂದು ಬಹು ದಿನಗಳಿಂದಲೂ ಕನಸು ಕಂಡಿದ್ದಾರೆ."ನಾನಿನ್ನೂ ಸಾಧಿಸಬೇಕಾಗಿರುವುದು ಬಹಳವೇ ಇದೆ, ಆದರೆ ನನ್ನ ವೃತ್ತಿ ಜೀವನದ ಪ್ರಾರಂಭದಲ್ಲೇ ಇಂತಹಾ ಸ್ಟಾರ್ ನಟನ ಜತೆ ಅಭಿನಯಿಸುವ ಅವಕಾಶ ನನಗೆ ದೊರೆಯಲಿದೆ ಎಂದೆಣಿಸಿರಲಿಲ್ಲ, ದೈವ ನನಗೆ ವರ ನೀಡಿದೆ.. ಈ ಕ್ಷಣದಲ್ಲಿ ನಾನು ಅದೃಷ್ಟಶಾಲಿಯಾಗಿದ್ದೇನೆ " ಎಂದಿದ್ದಾರೆ.