ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ನಟಿಯ ಆಸ್ಕರ್ ಪ್ರತಿಮೆ ಕಳ್ಳತನ, ವ್ಯಕ್ತಿ ಬಂಧನ

ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು ...
ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಫ್ರಾನ್ಸೆಸ್ ಮೆಕ್ಡೋರ್ಮಾಂಡ್
ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಫ್ರಾನ್ಸೆಸ್ ಮೆಕ್ಡೋರ್ಮಾಂಡ್

ಲಾಸ್ ಏಂಜಲೀಸ್: ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಫ್ರಾನ್ಸೆಸ್ ಮೆಕ್ಡೋರ್ಮಾಂಡ್ ಅವರ ಆಸ್ಕರ್ ಪ್ರತಿಮೆಯನ್ನು ವ್ಯಕ್ತಿಯೊಬ್ಬ ಅಪಹರಿಸಿದ್ದಾನೆ. ನಂತರ ಅವನನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಷಯವನ್ನು ಲಾಸ್ ಏಂಜಲೀಸ್ ಪೊಲೀಸರೇ ದೃಢಪಡಿಸಿದ್ದು 47 ವರ್ಷದ ಟೆರ್ರಿ ಬ್ರಿಯಾಂಟ್ ಎಂಬಾತನನ್ನು ಪ್ರಶಸ್ತಿ ಪ್ರದಾನ ಸಮಾರಂಭ ನಡೆದ ದಿನವಾದ ಭಾನುವಾರವೇ ಸಂಶಯ ಕಂಡು ಬಂಧಿಸಿದರು.

ತ್ರಿ ಬಿಲ್ ಬೋರ್ಡ್ ಔಟ್ ಸೈಡ್ ಎಬ್ಬಿಂಗ್, ಮಿಸ್ಸೌರಿ ಚಿತ್ರದಲ್ಲಿನ ಅದ್ಭುತ ನಟನೆಗಾಗಿ ಫ್ರಾನ್ಸೆಸ್ ಮೆಕ್ಡೋರ್ಮಾಂಡ್ ಈ ಸಾಲಿನ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದ್ದರು.  ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ನಂತರ ಔತಣಕೂಟ ನಡೆಯಿತು. ನಂತರ ಗವರ್ನರ್ಸ್  ಬಾಲ್ ನಲ್ಲಿ ಇರಿಸಲಾಗಿದ್ದ ಆಸ್ಕರ್ ಪ್ರತಿಮೆಯನ್ನು ಆರೋಪಿ ಅಪಹರಿಸಿದ್ದ.

ಬ್ರಿಯಾಂಟ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಟಿಕೆಟ್ ಪಡೆದು ಒಳಬಂದಿದ್ದ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಪ್ರಶಸ್ತಿ ಸ್ವೀಕರಿಸಿ ಖುಷಿಯಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ನಟಿ ಮೆಕ್ಡೋರ್ಮಾಂಡ್ ಗೆ ನಂತರ  ತಮ್ಮ ಆಸ್ಕರ್ ಪ್ರತಿಮೆಯನ್ನು ತೆಗೆದುಕೊಳ್ಳಲೆಂದು ಹೋದಾಗ ಇಟ್ಟಿದ್ದ ಜಾಗದಲ್ಲಿ ಇರಲಿಲ್ಲ. ತೀವ್ರ ದುಃಖಿತರಾಗಿ ಅಳುತ್ತಾ ತನ್ನ ಪತಿ ಚಿತ್ರ ನಿರ್ದೇಶಕ ಜೊಯೆಲ್ ಕೊಯೆನ್ ಜೊತೆ ಮನೆಗೆ ಹೋಗಲು ಅಣಿಯಾದರು.

ಆದರೆ ಮತ್ತೆ ಎಲ್ಲರೂ ಸೇರಿ ಹುಡಿಕಿದಾಗ ಸಿಕ್ಕಿತು. ಮತ್ತೆ ನಟಿಗೆ ಆಸ್ಕರ್ ಪ್ರತಿಮೆಯನ್ನು ನೀಡಲಾಯಿತು ಎಂದು ಲಾಸ್ ಏಂಜಲೀಸ್ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com