ಯುಗಾದಿ ಹಬ್ಬದಂದು ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕೆ ಮುಹೂರ್ತ

ಸ್ಯಾಂಡಲ್ವುಡ್ ನ ಸೂಪರ್ ಹಿಟ್ ಹೆಬ್ಬುಲಿ ಚಿತ್ರದ ನಂತರ ಮತ್ತೆ ಒಂದಾದ ಕಿಚ್ಚ ಸುದೀಪ್ ಮತ್ತು ಎಸ್ ಕೃಷ್ಣ ಜೋಡಿ ಪೈಲ್ವಾನ್ ಚಿತ್ರವನ್ನು ಘೋಷಿಸಿತ್ತು. ಅಂದಿನಿಂದ ಚಿತ್ರದ ಕುರಿತು...
ಸುದೀಪ್
ಸುದೀಪ್
ಸ್ಯಾಂಡಲ್ವುಡ್ ನ ಸೂಪರ್ ಹಿಟ್ ಹೆಬ್ಬುಲಿ ಚಿತ್ರದ ನಂತರ ಮತ್ತೆ ಒಂದಾದ ಕಿಚ್ಚ ಸುದೀಪ್ ಮತ್ತು ಎಸ್ ಕೃಷ್ಣ ಜೋಡಿ ಪೈಲ್ವಾನ್ ಚಿತ್ರವನ್ನು ಘೋಷಿಸಿತ್ತು. ಅಂದಿನಿಂದ ಚಿತ್ರದ ಕುರಿತು ಸಾಕಷ್ಟು ಕುತೂಹಲ ಕೆರಳಿಸಿತ್ತು. 
ಚಿತ್ರದಲ್ಲಿ ಸುದೀಪ್ ಬಾಕ್ಸರ್ ಮತ್ತು ಕುಸ್ತಿಪಟುವಿನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ಮುಹೂರ್ತ ಮಾರ್ಚ್ 2ರಂದು ನೆರವೇರಿತ್ತು. ಇದೀಗ ಪೈಲ್ವಾನ್  ಚಿತ್ರದ ಮುಹೂರ್ತ ಯುಗಾದಿ ಹಬ್ಬದಂದು ನೆರವೇರಲಿದೆ. 
ದಿ ವಿಲನ್ ಚಿತ್ರದ ಶೂಟಿಂಗ್ ಮುಗಿಸಿರುವ ಸುದೀಪ್ ಸದ್ಯ ಅಂಬಿ ನಿಂಗೆ ವಯಸ್ಸಾಯ್ತು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಯುಗಾದಿ ಹಬ್ಬದಂದು ಚಿತ್ರದ ಮುಹೂರ್ತ ನೆರವೇರಲಿದ್ದು ಕ್ರಿಕೆಟ್ ಲೀಗ್ ಮುಕ್ತಾಯದ ನಂತರ ಏಪ್ರಿಲ್ ಚಿತ್ರೀಕರಣ ಆರಂಭಿಸಲು ಚಿತ್ರತಂಡ ತೀರ್ಮಾನಿಸಿದೆ. 
ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಬಾಕ್ಸರ್ ಪಾತ್ರದಲ್ಲಿ ಅಭಿನಯಿಸುತ್ತಿರುವುದರಿಂದ ಆ ಪಾತ್ರಕ್ಕೆ ಬೇಕಾದಂತೆ ದೇಹವನ್ನು ಸದೃಢಗೊಳಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಥಾಯ್ಲೆಂಡ್ ಗೆ ಪ್ರಯಾಣಿಸಲಿರುವ ಸುದೀಪ್ ಮಾರ್ಷಲ್ ಆರ್ಟ್ಸ್ ಕಲಿಯಲಿದ್ದಾರೆ. 
ಆರ್‌ಆರ್‌ಆರ್ ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ಪೈಲ್ವಾನ್ ಚಿತ್ರ ನಿರ್ಮಾಣವಾಗುತ್ತಿದ್ದು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com