ಈ ವಾರ ಜನಾರ್ದನ್ ಚಿಕ್ಕಣ್ಣ ಅವರ ಚೊಚ್ಚಲ ನಿರ್ದೇಶನದ ಗುಲ್ಟು ಚಿತ್ರ ಬಿಡುಗಡೆಯಾಗುತ್ತಿದೆ. ಇದರಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುವ ಅನೇಕ ಅಂಶಗಳಿವೆ. ಹೊಸಬ ನಟ ನವೀನ್ ಶಂಕರ್ ಜೊತೆ ಹಿರಿಯ ಕಲಾವಿದ ಅವಿನಾಶ್ ಮತ್ತು ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ. ಮತ್ತೊಂದು ಚಿತ್ರದ ಆಕರ್ಷಣೆ ನಟಿ ಸೋನು ಗೌಡ. ತನ್ನ ವೃತ್ತಿ ಜೀವನದಲ್ಲಿ ಇದು ಬಹುಮುಖ್ಯ ಪಾತ್ರ ಎನ್ನುತ್ತಾರೆ ಸೋನು ಗೌಡ.
ಇದರಲ್ಲಿ ಸೋನು ಗೌಡರದ್ದು ಎರಡು ಬಗೆಯ ಪಾತ್ರ. ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸಲಹೆಗಾರ್ತಿಯಾಗಿ ಮತ್ತು ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.
ವಿವಿದ್ ಸಿನಿಮಾದಡಿ ಗುಲ್ಟುವನ್ನು ನಿರ್ಮಿಸಲಾಗಿದ್ದು ಗೂಢಲಿಪೀಕರಣ ಮತ್ತು ಅಸಂಕೇತಿಕರಣದ ಬಗ್ಗೆ ಕಥೆ ಹೊಂದಿದೆ. ಅಮಿತ್ ಆನಂದ್ ಸಂಗೀತ ಮತ್ತು ಶಾಂತಿ ಸಾಗರ್ ಛಾಯಾಗ್ರಹಣ ಚಿತ್ರಕ್ಕಿದೆ.
Advertisement