ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಪುನೀತ್ ರಾಜ್ ಕುಮಾರ್; ಡಾ. ರಾಜ್ ಕುರಿತ ಪುಸ್ತಕ ಅರ್ಪಣೆ

ನಗರದಲ್ಲಿ ಬಿಜೆಪಿ ಸಮಾವೇಶಕ್ಕಾಗಿ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು....
ಬೆಂಗಳೂರಿನಲ್ಲಿ  ಪತ್ನಿ ಅಶ್ವಿನಿ ಜೊತೆಗೂಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಪುನೀತ್ ತಾವು ರಾಜ್ ಕುಮಾರ್ ಬಗ್ಗೆ ಬರೆದ ಪುಸ್ತಕವನ್ನು ನೀಡಿದರು.
ಬೆಂಗಳೂರಿನಲ್ಲಿ ಪತ್ನಿ ಅಶ್ವಿನಿ ಜೊತೆಗೂಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಪುನೀತ್ ತಾವು ರಾಜ್ ಕುಮಾರ್ ಬಗ್ಗೆ ಬರೆದ ಪುಸ್ತಕವನ್ನು ನೀಡಿದರು.
Updated on: 

ಬೆಂಗಳೂರು: ನಗರದಲ್ಲಿ ಬಿಜೆಪಿ ಸಮಾವೇಶಕ್ಕಾಗಿ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಪತ್ನಿ ಅಶ್ವಿನಿ ಜೊತೆ ಭೇಟಿ ಮಾಡಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಫೋಟೋ ಹಾಕಿ ತಮ್ಮ ಸಂತಸ ಹಂಚಿಕೊಂಡಿರುವ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಕ್ಲಬ್ ಪುಟದಲ್ಲಿ ಅವರು ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಪ್ರಸ್ತಾಪಿಸಲಾಗಿದೆ.

ಇದೇ ವೇಳೆ ಡಾ ರಾಜ್ ಕುಮಾರ್ ಅವರ ಬಗ್ಗೆ ಪುನೀತ್ ರಾಜ್ ಕುಮಾರ್ ಬರೆದಿರುವ 'ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ' (person behind the personality) ಪುಸ್ತಕವನ್ನ ಪ್ರಧಾನಿಗೆ ಉಡುಗೊರೆಯಾಗಿ ನೀಡಿ ಗೌರವಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯ ಚುನಾವಣಾ ಆಯೋಗದ ರಾಯಭಾರಿ ಆಗಿದ್ದಾರೆ.

ಕರ್ನಾಟಕದಲ್ಲಿ ಮೋದಿ ಭಾಷಣ ಮಾಡುವಾಗ ಡಾ ರಾಜ್ ಕುಮಾರ್ ಅವರ ಹೆಸರನ್ನು ಮೊನ್ನೆ ಪ್ರಸ್ತಾಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com