ಬೆಂಗಳೂರು: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ ನ ಖ್ಯಾತ ನಿರ್ದೇಶಕ ಪಿಎನ್ ಸತ್ಯ ವಿಧಿವಶರಾಗಿದ್ದಾರೆ.
ಸತ್ಯ ಅವರಿಗೆ ನಾಗರಬಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡಬಂದ ಹಿನ್ನೆಲೆಯಲ್ಲಿ ನಿನ್ನೆ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಇಂದು ಸಂಜೆ ಲೋ ಬಿಪಿ ಆದ ಕಾರಣ ಕೊನೆಯುಸಿರೆಳೆದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮೆಜೆಸ್ಟಿಕ್ ಚಿತ್ರ ದೊಡ್ಡ ಬ್ರೇಕ್ ನೀಡಿತ್ತು. ಈ ಚಿತ್ರದ ಮೂಲಕ ಪಿಎನ್ ಸತ್ಯ ಹಾಗೂ ದರ್ಶನ್ ಗಾಂಧಿನಗರದಲ್ಲಿ ತಮ್ಮನ್ನು ತಾನು ಗುರುತಿಸಿಕೊಂಡಿದ್ದರು.
ಮೆಜೆಸ್ಟಿಕ್, ಡಾನ್, ದಾಸ, ಸರ್ದಾರ, ಶಾಸ್ತ್ರಿ ಮತ್ತು ಮರಿ ಟೈಗರ್ ಸೇರಿದಂತೆ 16 ಚಿತ್ರಗಳನ್ನು ಪಿಎನ್ ಸತ್ಯ ನಿರ್ದೇಶಿಸಿದ್ದಾರೆ. ಇದರ ಜತೆಗೆ 21 ಚಿತ್ರಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ.