100 ಕೋಟಿ ಕ್ಲಬ್ ಸೇರಿದ ರಾಝಿ ಚಿತ್ರ!

ಆಲಿಯಾ ಭಟ್ ಅಭಿನಯದ ರಾಝಿ ಚಿತ್ರ 100 ಕೋಟಿ ಕ್ಲಬ್ ಸೇರಿದೆ.
100 ಕೋಟಿ ಕ್ಲಬ್ ಸೇರಿದ ರಾಝಿ ಚಿತ್ರ!
100 ಕೋಟಿ ಕ್ಲಬ್ ಸೇರಿದ ರಾಝಿ ಚಿತ್ರ!
Updated on
ಮುಂಬೈ: ಆಲಿಯಾ ಭಟ್ ಅಭಿನಯದ ರಾಝಿ ಚಿತ್ರ 100 ಕೋಟಿ ಕ್ಲಬ್ ಸೇರಿದೆ. 
ಭಾರತೀಯ ಮಹಿಳಾ ಪತ್ತೆದಾರಿ ಪಾಕಿಸ್ತಾನ ವ್ಯಕ್ತಿಯೊಂದಿಗೆ ಮದುವೆ ಆಗುವ ಮೂಲಕ ದೇಶದ ಪರವಾಗಿ ಕೆಲಸ ಮಾಡುವ ಕಥಾಹಂದರ ಹೊಂದಿರುವ ರಾಝಿ ಚಿತ್ರ ದೇಶಾದ್ಯಂತ ಮೆಚ್ಚುಗೆ ಗಳಿಸಿತ್ತು. ಬಿಡುಗಡೆಯಾದ ಮೂರನೇ ಭಾನುವಾರ ರಾಝಿ ಚಿತ್ರ 4.42 ಕೋಟಿ 
ರೂಪಾಯಿ ಗಳಿಕೆ ಮಾಡಿತ್ತು. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 102.50 ಕೋಟಿ ರೂಪಾಯಿಯಾಗಿದ್ದು,  100 ಕೋಟಿ ರೂ ಕ್ಲಬ್ ಸೇರಿದೆ. 
2018 ರಲ್ಲಿ ಪದ್ಮಾವತ್ ನಂತರ 100 ಕೋಟಿ ರೂಪಾಯಿ ಕ್ಲಬ್ ಸೇರಿರುವ 5 ನೇ ಸಿನಿಮಾ ಆಗಿದೆ. ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂಪಾಯಿ ಗಳಿಸುತ್ತಿರುವ ಆಲಿಯಾ ಭಟ್ ನಟನೆಯ ಮೂರನೇ ಚಿತ್ರ ಎಂಬುದು ವಿಶೇಷ. 1971ರಲ್ಲಿ ನಡೆದ ನೈಜ ಘಟನೆ ಆಧರಿತ ಕಥೆಯನ್ನು `ರಾಝಿ’ ಹೊಂದಿದ್ದು, ಹರೀಂದರ್ ಸಿಕ್ಕಾರ `ಕಾಲಿಂಗ್ ಸೆಹಮತ್’ ಕಾದಂಬರಿ ಎಳೆಯನ್ನು ಸಿನಿಮಾ ಹೊಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com