ಚಿಕ್ಕಮ್ಮ ಪ್ರಿಯಾಂಕ ಉಪೇಂದ್ರ '2nd ಹಾಫ್' ಚಿತ್ರದ ಪ್ರಮುಖ ಹೈಲೆಟ್: ನಿರಂಜನ್ ಸುಧೀಂದ್ರ

ಸ್ಯಾಂಡಲ್ ವುಡ್ ನಲ್ಲಿ ಬೇಕಾದ ಎಲ್ಲಾ ಗುಣಗಳನ್ನು ತನ್ನ ಚಿಕ್ಕಪ್ಪ ಉಪೇಂದ್ರ ಅವರಿಂದ ಪಡೆದಿರುವ ಸುದೀಂದ್ರ ನಿರಂಜನ್ ,2 ನೇ ಹಾಫ್ ಚಿತ್ರದ ಮೂಲಕ ವೃತ್ತಿ ಬದುಕು ಆರಂಭಿಸುತ್ತಿದ್ದಾರೆ. ಈ ಚಿತ್ರದ ಕುರಿತು ಅವರು ಸಿಟಿ ಎಕ್ಸ್ ಪ್ರೆಸ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ನಿರಂಜನ್ , ಪ್ರಿಯಾಂಕಾ ಉಪೇಂದ್ರ
ನಿರಂಜನ್ , ಪ್ರಿಯಾಂಕಾ ಉಪೇಂದ್ರ
Updated on

ಸ್ಯಾಂಡಲ್ ವುಡ್ ನಲ್ಲಿ  ಬೇಕಾದ ಎಲ್ಲಾ ಗುಣಗಳನ್ನು  ತನ್ನ ಚಿಕ್ಕಪ್ಪ ಉಪೇಂದ್ರ ಅವರಿಂದ ಪಡೆದಿರುವ  ಸುದೀಂದ್ರ ನಿರಂಜನ್ ,2 ನೇ ಹಾಫ್   ಚಿತ್ರದ  ಮೂಲಕ  ವೃತ್ತಿ  ಬದುಕು ಆರಂಭಿಸುತ್ತಿದ್ದಾರೆ. ಈ ಚಿತ್ರದ ಕುರಿತು ಅವರು  ಸಿಟಿ ಎಕ್ಸ್ ಪ್ರೆಸ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

"ಇದು ಕೇವಲ ಅನಿರೀಕ್ಷಿತ.ವೃತ್ತಿಜೀವನವಾಗಿ ನಟನೆಯನ್ನು ತೆಗೆದುಕೊಳ್ಳುವುದರ ಕುರಿತು ಯೋಚಿಸುತ್ತಿದ್ದರೂ, ನಾನು 2 ನೇ ಹಾಫ್ ನಂತಹ ಚಿತ್ರದೊಂದಿಗೆ ಪ್ರಾರಂಭವಾಗುವುದೆಂದು ಕನಸು ಕಂಡಿರಲಿಲ್ಲ.  ಬ್ಯೂಸಿನೆಸ್ ಅಡ್ಮಿನಿಸ್ಟ್ರೇಷನ್  ವಿಷಯದಲ್ಲಿ ಅಂತಿಮ ಪದವಿಯಲ್ಲಿರುವಾಗ  ಚಿಕ್ಕಮ್ಮ ಪ್ರಿಯಾಂಕ ಉಪೇಂದ್ರ , ಈ ಚಿತ್ರದಲ್ಲಿನ ಪಾತ್ರಕ್ಕಾಗಿ  ಬೈಕ್  ಓಡಿಸುವುದನ್ನು ಕಲಿಯಬೇಕು ಎಂದರು.  ನಾನು ಅವರಿಗೆ ತರಬೇತಿ ನೀಡಿದೆ.  ಅಲ್ಲಿಯೇ ಇದ್ದ ನಿರ್ದೇಶಕ ಯೋಗಿ ದೇವಗಂಗೆ,  ಮುಖ್ಯ ಪಾತ್ರದಲ್ಲಿ ನಟಿಸಲು ನಾನೇ ಸರಿ ಎಂದು ಯೋಚಿಸಿದ್ದರು ಎಂದು  ಹೇಳುವ ನಿರಂಜನ್ ಅನಿರೀಕ್ಷಿತವಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾಗಿ ಹೇಳಿದ್ದಾರೆ.

ನಿರಂಜನ್,  ನ್ಯತ್ಯದಲ್ಲಿ ಪರಿಣತಿ ಪಡೆದಿದ್ದಾರೆ. ವಿಶೇಷವಾಗಿ  ವೆಸ್ಟರ್ನ್ ಡ್ಯಾನ್ಸ್ ಶೈಲಿಯಲ್ಲಿ ತರಬೇತಿ ಪಡೆದಿದ್ದಾರೆ. ಜೊತೆಗೆ ನಿರಂಜನ್  ರಂಗಭೂಮಿ ಕಲಾವಿದರು ಕೂಡಾ  ಹೌದು.   ರಂಗಭೂಮಿಯಲ್ಲೂ ತಮ್ಮಗೆ ಆಸಕ್ತಿ ಇದ್ದು,  ತಮ್ಮ ಚಿಕ್ಕಪ್ಪ ಹಾಗೂ ಚಿಕ್ಕಮ್ಮನನ್ನು ಹತ್ತಿರದಿಂದ ನೋಡುತ್ತಿದೆ.
ಉಪಿ-2 ಸಿನಿಮಾದಲ್ಲಿ ಸಹಾಯಕನಾಗಿ ಕೆಲಸ ಮಾಡುವ ಮೂಲಕ ಕ್ಯಾಮರಾ ಕೆಲಸದ ಜಟಿಲತೆಗಳನ್ನು ಅರ್ಥಮಾಡಿಕೊಂಡಿದ್ದೇನೆ.  ಚಿತ್ರರಂಗ ಪ್ರವೇಶಿಸುವ ಮುನ್ನ ಎಲ್ಲಾ ವಿಭಾಗದ ಬಗ್ಗೆ ತಿಳಿವಳಿಕೆ ಪಡೆದಿದ್ದೇನೆ.  ನಾನು ನನ್ನ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಲು ಬಯಸುತ್ತೇನೆ, ಸಂಪೂರ್ಣವಾಗಿ ಕಲಿತು   ಬರುತ್ತೇನೆ ಮತ್ತು ನಿರ್ದೇಶಕನ ನಟನಾಗಿ. ಆದರೆ 2 ನೇ ಹಾಫ್  ಆಫರ್ ಬಂದಾಗ ನನ್ನಗೆ ಸರಿಯಾದ ಚಿತ್ರ ಎಂದು ನಾನು ಅರಿತುಕೊಂಡೆ "ಎಂದು ನಿರಂಜನ್ ಹೇಳುತ್ತಾರೆ.
ಚಿತ್ರರಂಗದಲ್ಲಿ  ತಾಳ್ಮೆ ಬಹುಮುಖ್ಯವಾಗಿದ್ದು, ಕಲಾವಿದರು  ಹೇಗೆ ತನ್ನ ಕೆಲಸಕ್ಕೆ   ಆರ್ಪಿಸಿಕೊಳ್ಳಬೇಕು ಎಂಬ ಬಗ್ಗೆ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಅವರು ಹೇಳಿಕೊಟ್ಟಿದ್ದಾರೆ.
  2ನೇ ಹಾಫ್ ಚಿತ್ರದಲ್ಲಿ ಪ್ರಿಯಾಂಕ ಅವರೊಂದಿಗೆ  ತೆರೆ ಹಂಚಿಕೊಂಡಿದ್ದು,  ತಾಯಿ, ಮಗನ ರೀತಿಯಲ್ಲಿ  ರೀತಿಯಲ್ಲಿರುತ್ತವೆ. ಆದರೆ, ಕ್ಯಾಮರಾ ಮುಂದೆ  ವೃತ್ತಿಗೆ ಪ್ರಿಯಾಂಕಾ ಹೆಚ್ಚಿನ ಗಮನ ಹರಿಸುತ್ತಾರೆ. ಆದರೆ, ತನ್ನ ಪಾತ್ರ ನಿರ್ವಹಣೆ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ ನಿರಂಜನ್ .

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com