ಮೀಟೂ ಆರೋಪಕ್ಕೆ ಪತಿವ್ರತೆ ಹೇಳಿಕೆ: ಗುರುಪ್ರಸಾದ್ ವಿರುದ್ಧ ನಟಿ ಸಂಗೀತಾ ಭಟ್ ದೂರು

ಎರಡನೇ ಸಲ ಚಿತ್ರದ ನಟಿ ಸಂಗೀತಾ ಭಟ್ ಅವರು ನಿರ್ದೇಶಕ ಗುರುಪ್ರಸಾದ್ ವಿರುದ್ಧ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ...
ಸಂಗೀತಾ ಭಟ್, ಗುರುಪ್ರಸಾದ್
ಸಂಗೀತಾ ಭಟ್, ಗುರುಪ್ರಸಾದ್
Updated on
ಎರಡನೇ ಸಲ ಚಿತ್ರದ ನಟಿ ಸಂಗೀತಾ ಭಟ್ ಅವರು ನಿರ್ದೇಶಕ ಗುರುಪ್ರಸಾದ್ ವಿರುದ್ಧ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. 
ಸಂಗೀತಾ ಭಟ್ ಇತ್ತೀಚೆಗಷ್ಟೇ ಮೀಟೂ ಅಭಿಯಾನದಡಿ ಚಿತ್ರರಂಗದಲ್ಲಿ ತಮಗಾದ ಕೆಟ್ಟ ಅನುಭವ ಹಂಚಿಕೊಂಡಿದ್ದರು. ಇವರ ವಿರುದ್ಧ ಗುರುಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದಿದ್ದರು. 
ಮೀಟೂ ಆರೋಪ ಮಾಡುತ್ತಿರುವ ನಟಿಯರು ತಮ್ಮ ಮನೆಯಲ್ಲಿ ತಾವು ಪತಿವ್ರತೆ ಎಂಬುದನ್ನು ತೋರಿಸಿಕೊಳ್ಳಲು ಈ ರೀತಿ ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದ್ದರು. ಗುರುಪ್ರಸಾದ್ ಅವರ ಈ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. 
ಇದೀಗ ಗುರುಪ್ರಸಾದ್ ಹೇಳಿಕೆಗೆ ಬೇಸರ ವ್ಯಕ್ತಪಡಿಸಿರುವ ಸಂಗೀತಾ ಭಟ್ ಪತಿಯೊಂದಿಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿ ಗುರುಪ್ರಸಾದ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com