ವಕೀಲೆ ಪಾತ್ರದಲ್ಲಿ 'ರಂಗಿತರಂಗ' ಬೆಡಗಿ ರಾಧಿಕಾ ಚೇತನ್!

ನಿರ್ದೇಶಕ ಆಕಾಶ್ ಶ್ರೀವತ್ಸ ಅವರ ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ನಟ ರಮೇಶ್ ಅರವಿಂದ್ ನಟಿಸುತ್ತಿರುವುದು ಹಳೆ ಸುದ್ದಿ. ಇದೀಗ ಚಿತ್ರದ ನಾಯಕಿಯಾಗಿ ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್....
ರಾಧಿಕಾ ಚೇತನ್
ರಾಧಿಕಾ ಚೇತನ್
ಬೆಂಗಳೂರು: ನಿರ್ದೇಶಕ ಆಕಾಶ್ ಶ್ರೀವತ್ಸ ಅವರ ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ನಟ ರಮೇಶ್ ಅರವಿಂದ್ ನಟಿಸುತ್ತಿರುವುದು ಹಳೆ ಸುದ್ದಿ. ಇದೀಗ ಚಿತ್ರದ ನಾಯಕಿಯಾಗಿ "ರಂಗಿತರಂಗ" ಖ್ಯಾತಿಯ ರಾಧಿಕಾ ಚೇತನ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಹೊಸ ವಿಷಯವಾಗಿದೆ.
ರಮೇಶ್ ಈ ಚಿತ್ರದಲ್ಲಿ ಎಸಿಪಿ ದರ್ಜೆಯ ಅಧಿಕಾರಿಯಾಗಿ ಕಾಣಿಸಿಕೊಂಡರೆ ರಾಧಿಕಾ ವಕೀಲರಾಗಿ ತೆರೆಯ ಮೇಲೆ ಬರಲಿದ್ದಾರೆ. ಚಿತ್ರಕ್ಕೆ ಇನ್ನೂ ಸೂಕ್ತ ಶೀರ್ಷಿಕೆ ಹುಡುಕಾಟ ನಡೆಯುತ್ತಿದೆ. ಜತೆಗೆ ಇನ್ನೊಬ್ಬ ನಾಯಕಿಯ ಪಾತ್ರಕ್ಕೆ ಸಹ ಸೂಕ್ತ ನಟಿಯ ಹುಡುಕಾಟ ನಡೆದಿದೆ. ಉಳಿದಂತೆ ಚಿತ್ರೀಕರಣ ಇದೇ ತಿಂಗಳ ಮಧ್ಯಭಾಗದಿಂದ ಪ್ರಾರಂಭಗೊಳ್ಳಲಿದೆ.
ಆಕಾಶ್ ಹಾಗೂ ಅಭಿಜಿತ್ ವೈ.ಆರ್. ಕಥೆ ಇರುವ ಈ ಚಿತ್ರಕ್ಕೆ ಜುಧಾ ಸ್ಯಾಂಡಿ ಸಂಗೀತವಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com