ಕೇರಳದಿಂದ ಕರ್ನಾಟಕಕ್ಕೆ 'ಶಕೀಲಾ 'ಚಿತ್ರದ ಶೂಟಿಂಗ್ ಸ್ಥಳಾಂತರದಿಂದ ಗೊತ್ತಿಲ್ಲದ ಸ್ಥಳಗಳ ಪತ್ತೆ- ನಿರ್ದೇಶಕ

'ಶಕೀಲಾ' ಚಿತ್ರದ ಚಿತ್ರೀಕರಣವನ್ನು ಕೇರಳದಿಂದ ಕರ್ನಾಟಕಕ್ಕೆ ಸ್ಥಳಾಂತರದಿಂದ ಕರ್ನಾಟಕದಲ್ಲಿ ಎಷ್ಟೋ ಗೊತ್ತಿಲ್ಲದ ಅನೇಕ ಸ್ಥಳಗಳನ್ನು ಪತ್ತೆ ಹಚ್ಚಲು ಅವಕಾಶವಾಯಿತು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳುತ್ತಾರೆ.
ರಿಚಾ ಛಾಡ್ಡಾ
ರಿಚಾ ಛಾಡ್ಡಾ

ಬೆಂಗಳೂರು:  ವಿನಾಶಕಾರಿ ಪ್ರವಾಹದ ಕಾರಣದಿಂದ ಬಾಲಿವುಡ್ ಬಯೋಪಿಕ್  'ಶಕೀಲಾ' ಚಿತ್ರದ ಚಿತ್ರೀಕರಣವನ್ನು ಕೇರಳದಿಂದ ಕರ್ನಾಟಕಕ್ಕೆ ಸ್ಥಳಾಂತರಿಸಿದ್ದರಿಂದ ಕರ್ನಾಟಕದಲ್ಲಿ ಎಷ್ಟೋ ಗೊತ್ತಿಲ್ಲದ  ಅನೇಕ ಸ್ಥಳಗಳನ್ನು  ಪತ್ತೆ ಹಚ್ಚಲು ಅವಕಾಶವಾಯಿತು  ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳುತ್ತಾರೆ.

ರಿಚಾ ಛಾಡ್ಡಾ ಅಭಿನಯಿಸುತ್ತಿರುವ ಶಕೀಲಾ , ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿನ ನೀಲಿ ತಾರೆ ಎಂದೇ ಹಣೆಪಟ್ಟಿ ಕಟ್ಟಿಕೊಂಡಿದ್ದ  ಶಕೀಲಾ ಜೀವನ ಚರಿತ್ರೆ ಕುರಿತಾದ್ದಾಗಿದೆ.

 ಕಥೆ ಹಾಗೂ ಚಿತ್ರೀಕರಣದ ಸ್ಥಳಗಳನ್ನು ಈ ಹಿಂದೆಯೇ ಪೂರ್ಣಗೊಳಿಸಲಾಗಿತ್ತು. ಅದು ನಿತ್ಯ ಕೂಡಾ ನಡೆಯುತ್ತಿರುತ್ತದೆ. ಕೇರಳದಲ್ಲಿ ಮಳೆ ಕಾರಣದಿಂದಾಗಿ ಕೂಡಲೇ ಚಿತ್ರೀಕರಣವನ್ನು ಬದಲಾವಣೆ ಮಾಡಬೇಕಾಗಿದ್ದರಿಂದ ತುಂಬಾ ಕಷ್ಟವಾಯಿತು ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಆದರೆ, ಕರ್ನಾಟದಲ್ಲಿ ಇನ್ನೂ ಗೊತ್ತಿಲ್ಲದ ಅನೇಕ ಸ್ಥಳಗಳಿವೆ . ಇಂತಹ ಸ್ಥಳಗಳ ಹುಡುಕಾಟ ನಡೆಸಲು ಕೇರಳ ನೆರವಾಯಿತು . ಕಥೆ ಏನನ್ನೂ ಹೇಳುತ್ತದೆಯೋ ಆ ರೀತಿಯ ಸ್ಥಳಗಳನ್ನು  ಪತ್ತೆ ಮಾಡಿರುವುದಾಗಿ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಇಂದ್ರಜಿತ್  ತಿಳಿಸಿದರು.

ದಕ್ಷಿಣ ಭಾರತದಲ್ಲಿ ನೀಲಿ ತಾರೆ ಎಂದೇ  ಹಣೆಪಟ್ಟಿ ಕಟ್ಟಿಕೊಂಡಿದ್ದ ಶಕೀಲಾ ಅವರ ಜೀವನ ಚರಿತ್ರೆ ಈ ಚಿತ್ರದ ಕಥಾ ಹಂದರವಾಗಿದೆ. ಆಕೆ ಒಳ್ಳೆಯವರಾಗಿದ್ದರೂ ಸಮಾಜ ನೋಡುವ ದೃಷ್ಟಿಕೋನವೇ ಬೇರೆಯಾಗಿತ್ತು ಎನ್ನುತ್ತಾರೆ ಇಂದ್ರಜಿತ್ .
ಶಕೀಲಾ ಅಭಿನಯದ ಚಿತ್ರಗಳಿಗೆ ಸಂಬಂಧಿತ ಸಂಸ್ಥೆಗಳಿಂದ ಪ್ರಮಾಣ ಪತ್ರ ನೀಡಿದ್ದು, ಉತ್ತಮ ಆದಾಯ ಕೂಡಾ ಸಂಪಾದಿಸಿವೆ ಆದರೂ, ಅವರಿಗೆ ಗೌರವ ನೀಡುತ್ತಿರಲಿಲ್ಲ. ಚಿತ್ರರಂಗದಿಂದ ಹೊರ ಹಾಕಲಾಗಿತ್ತು. ಆಕೆಯ ಒಂದು ಮನೆ ಕೂಡಾ ಕೊಳ್ಳಲು ಆಗಿರಲಿಲ್ಲ. ಈ ಎಲ್ಲಾ ಸೂಕ್ಷ್ಮ ವಿಚಾರವನ್ನಿಟ್ಟುಕೊಂಡು ಸಿನಿಮಾ ಮಾಡಿರುವುದಾಗಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com