ಮಹೋನ್ ಲಾಲ್
ಮಹೋನ್ ಲಾಲ್

#MeToo ಒಂದು ಫ್ಯಾಷನ್ ಆಗುತ್ತಿದೆ: ನಟ ಮೋಹನ್ ಲಾಲ್

ಖ್ಯಾತ ಮಲೆಯಾಳಂ ನಟ ಮೋಹನ್ ಲಾಲ್ ಅವರು ಸಿನಿಮಾ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೀವ್ರ ಸಂಚಲನ...
ಬೆಂಗಳೂರು: ಖ್ಯಾತ ಮಲೆಯಾಳಂ ನಟ ಮೋಹನ್ ಲಾಲ್ ಅವರು ಸಿನಿಮಾ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೀವ್ರ ಸಂಚಲನ ಉಂಟು ಮಾಡಿರುವ #MeToo ಅಭಿಯಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅದೊಂದು ಫ್ಯಾಷನ್ ಪ್ರವೃತ್ತಿಯಾಗಿದೆ ಮತ್ತು ಸ್ವಲ್ಪ ದಿನ ಅದು ಜೀವಂತವಾಗಿರಲಿದೆ ಎಂದು ಹೇಳಿದ್ದಾರೆ.
ಮಲೆಯಾಳಂ ಚಿತ್ರೋದ್ಯಮದಲ್ಲಿ ಯಾವುದೇ ದೊಡ್ಡ ಸಮಸ್ಯೆ ಇಲ್ಲ. #MeToo ಒಂದು ಚಳವಳಿ ಅಂತ ನೀವು ಭಾವಿಸಬೇಡಿ. ಅದೊಂದು ಫ್ಯಾಷನ್ ಆಗಿರುವುದು ದುಃಖಕರ ಎಂದು ಮೋಹನ್ ಲಾಲ್ ಅವರು ಇತ್ತೀಚಿಗೆ ದುಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆಯ
#MeToo ಅಭಿಯಾನದ ಬಗ್ಗೆ ಹೆಚ್ಚು ಗೊತ್ತಿಲ್ಲ ಮತ್ತು ಲೈಂಗಿಕ ಕಿರುಕುಳ ಅನುಭವ ಇಲ್ಲದೆ ಆ ಬಗ್ಗೆ ಹೇಳಿಕೆ ನೀಡುವುದಿಲ್ಲ ಎಂದು ಮಲೆಯಾಳಂ ಸಿನಿಮಾ ಕಲಾವಿದರ ಸಂಘ(ಅಮ್ಮ)ದ ಅಧ್ಯಕ್ಷರಾಗಿರುವ ಮೋಹನ್ ಲಾಲ್ ಅವರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com