ಬೆಂಗಳೂರು: ಸ್ಯಾಂಡಲ್ವುಡ್ ನಟ ರಾಧಿಕಾ ಪಂಡಿತ್ ಅವರು ಅಭಿಮಾನಿಗಳ ಪ್ರೀತಿ ಕಂಡು ಫಿದಾ ಆಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಒಟ್ಟಿಗಿರುವ ಚಿತ್ರವನ್ನು ಅಭಿಮಾನಿಗಳು ತಮ್ಮ ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಲ್ಲದೇ ಮತ್ತೊಬ್ಬ ಅಭಿಮಾನಿ ತಮ್ಮ ಬಲಗೈ ಮೇಲೆ ಪ್ರಿನ್ಸೆಸ್ ರಾಧಿಕಾ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಂಡಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ನಿಮ್ಮ ಪ್ರೀತಿ ನಮ್ಮನ್ನು ಮೂಕವಿಸ್ಮಿತವಾಗಿಸಿದೆ. ಧನ್ಯವಾದಗಳು, ಆದರೆ ನಮಗೆ ನಿಮ್ಮ ಪ್ರೀತಿ ಹಾಗೂ ಆಶೀರ್ವಾದ ಅಷ್ಟೇ ಬೇಕು ಎಂದು ಬರೆದುಕೊಂಡಿದ್ದಾರೆ.