ಹಿಂದಿಯಲ್ಲಿ ಸನ್ನಿ ಲಿಯೋನ್ ಇದ್ದಂತೆ ಕನ್ನಡದಲ್ಲಿ ಸಂಯುಕ್ತಾ ಹೆಗ್ಡೆ: ಇಂಥಾ ಹೋಲಿಕೆ ಮಾಡಿದ್ಯಾರು ಗೊತ್ತಾ?

ಸನ್ನಿ ಲಿಯೋನ್ ಹಿಂದಿಯ ನೀಲಿ ತಾರೆ ಆದರೆ, ಕನ್ನಡದಲ್ಲಿ ಸಂಯುಕ್ತಾ ಹೆಗ್ಡೆ ಅಂತ ಯುವ ನಿರ್ದೇಶಕರೊಬ್ಬರು ಗಂಭೀರ ಆರೋಪ ಮಾಡಿದ್ದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ...
ಸಂಯುಕ್ತಾ ಹೆಗ್ಡೆ-ಸನ್ನಿ ಲಿಯೋನ್
ಸಂಯುಕ್ತಾ ಹೆಗ್ಡೆ-ಸನ್ನಿ ಲಿಯೋನ್
Updated on
ಬೆಂಗಳೂರು: ಸನ್ನಿ ಲಿಯೋನ್ ಹಿಂದಿಯ ನೀಲಿ ತಾರೆ ಆದರೆ, ಕನ್ನಡದಲ್ಲಿ ಸಂಯುಕ್ತಾ ಹೆಗ್ಡೆ ಅಂತ ಯುವ ನಿರ್ದೇಶಕರೊಬ್ಬರು ಗಂಭೀರ ಆರೋಪ ಮಾಡಿದ್ದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 
ನಟಿ ಸಂಯುಕ್ತಾ ಹೆಗ್ಡೆ ಒಬ್ಬ ಕೆಟ್ಟ ಹುಡುಗಿ, ಮದ್ಯ, ಸಿಗರೇಟ್, ಗಾಂಜಾ ಸೇವನೆಯಂತಾ ಎಲ್ಲಾ ದುಶ್ಚಟಗಳು ಅವಳಿಗಿದೆ. ಇವಳಿಂದ ಚಿತ್ರರಂಗ ಹಾಳಾಗುತ್ತಿದೆಯೆಂದು ಯುವ ನಿರ್ದೇಶಕ ಕೀರ್ತನ್ ಶೆಟ್ಟಿ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು ನಂತರ ಅದನ್ನು ಡಿಲೀಟ್ ಮಾಡಿದ್ದಾರೆ. 
ನನ್ನ ಮೀಟೂ ವಿತ್ ಫೈಟೂ ಚಿತ್ರದ ದಯಮಾಡಿ ಚಿತ್ರ ಶೂಟಿಂಗ್ ಆಗಿ ಬಿಡುಗಡೆಯಾಗುವರೆಗೂ ಬಿಟ್ಟು ಕೊಡುವುದಿಲ್ಲ. ಚಿತ್ರದಲ್ಲಿ ಮೊದಲ ಬಾರಿಗೆ ಮೀಟೂ ಆರೋಪ ಮಾಡಿದ್ದ ತೆಲುಗು ನಟಿ ಶ್ರೀರೆಡ್ಡಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ. 
ನನ್ನ ಚಿತ್ರದಲ್ಲಿ ಕಿರಿಕ್ ಹುಡುಗಿ ಬಜಾರಿ ಅಂತ ಹೆಸರುವಾಸಿಯಾದ ಗಂಡು ಬೀರಿ ಸಂಯುಕ್ತ ಹೆಗ್ಡೆ ತರಹದ ಒಂದು ಪಾತ್ರ ಇದೆ. ಈ ಪಾತ್ರಕ್ಕೆ ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಸೋನು ಪಾಟೀಲ್ ಅವರನ್ನು ಆಯ್ಕೆ ಮಾಡುವ ಆಲೋಚನೆ ಇದೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com