ಅಂಬರೀಶ್ ನಿಧನ: ಕುಮಾರಸ್ವಾಮಿ, ರಜನಿಕಾಂತ್ ಸೇರಿ ಗಣ್ಯರ ಕಂಬನಿ

ಕನ್ನಡದ ಹಿರಿಯ್ಯ ನಟ ಅಂಬರೀಶ್ ನಿಧನರಾಗಿದ್ದಾರೆ. ಸ್ಯಾಂಡಲ್ ವುಡ್ ರೆಬೆಲ್ ಸ್ಟಾರ್ ನಿಧನಕ್ಕೆ ಚಿತ್ರರಂಗ, ರಾಜಕೀಯ ವಲಯದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.
ಕನ್ನಡದ ಹಿರಿಯ ನಟ ಅಂಬರೀಶ್ ಜತೆ ಸೂಪರ್ ಸ್ತಾರ್ ರಜನಿಕಾಂತ್
ಕನ್ನಡದ ಹಿರಿಯ ನಟ ಅಂಬರೀಶ್ ಜತೆ ಸೂಪರ್ ಸ್ತಾರ್ ರಜನಿಕಾಂತ್
ಬೆಂಗಳೂರು: ಕನ್ನಡದ ಹಿರಿಯ್ಯ ನಟ ಅಂಬರೀಶ್ ನಿಧನರಾಗಿದ್ದಾರೆ. ಸ್ಯಾಂಡಲ್ ವುಡ್ ರೆಬೆಲ್ ಸ್ಟಾರ್ ನಿಧನಕ್ಕೆ ಚಿತ್ರರಂಗ, ರಾಜಕೀಯ ವಲಯದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅಂಬರೀಶ್ ನಿಧನಕ್ಕೆ ಸಂತಾಪ ಸೂಚಿಸಿದ್ದು ಅಂಬರೀಷ್ ಹೃದಯ ಶ್ರೀಮಂತಿಕೆಯ ವ್ಯಕ್ತಿತ್ವವುಳ್ಳವರಾಗಿದ್ದರು. ಹಾಗಾಗಿಯೇ ಅವರು ಪ್ರತಿಯೊಬ್ಬರ ಗೌರವಕ್ಕೆ ಪಾತ್ರರಾಗಿದ್ದರು. ಬರೀಷ್ ಅವರ ಅಕಾಲಿಕ ಮರಣ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗಕ್ಕೂ ಹಾಗೂ ಅಪಾರ ಅಭಿಮಾನಿಗಳಿಗೂ ನೀಡಲಿ ಎಂದಿದ್ದಾರೆ.
ಅಲ್ಲದೆ "ಕನ್ನಡ ಚಿತ್ರರಂಗ ಕಂಡ ಮಹತ್ವದ ಕಲಾವಿದ ಹಾಗೂ ಅಪರೂಪದ ವ್ಯಕ್ತಿತ್ವದ ರಾಜಕಾರಣಿ ಇನ್ನಿಲ್ಲ ಎನ್ನುವುದು ಅಪಾರ ದುಃಖವನ್ನುಂಟುಮಾಡಿದೆ.  ನ್ನ ಮತ್ತು ಅವರ ಸ್ನೇಹ ಅನುಗಾಲದ್ದು. ಚಿತ್ರರಂಗ ಹಾಗೂ ರಾಜಕಾರಣವನ್ನು ಮೀರಿದ ಸ್ನೇಹ ನಮ್ಮದಾಗಿತ್ತು. " ಎಂದೂ ಟ್ವೀಟ್ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಬರೀಶ್ ನಿಧನಕ್ಕೆ ತಮ್ಮ ಟ್ವಿಟ್ಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಿರಿಯ ನಟ, ಮಾಜಿ ಸಚಿವ ಮತ್ತು ದೀರ್ಘಕಾಲದ ನನ್ನ ಗೆಳೆಯ ಅಂಬರೀಷ್ ಅವರ ಸಾವು ದಿಗ್ಭ್ರಮೆ‌ ಉಂಟು ಮಾಡಿದೆ. ತೀರಾ ಅನಿರೀಕ್ಷಿತ ಸಾವು. ಚಿತ್ರರಂಗ ಮತ್ತು ರಾಜಕೀಯರಂಗಗಳೆರಡರಲ್ಲಿಯೂ ಜನಮನ ಗೆದ್ದ ನಾಯಕ ಅಂಬರೀಷ್.‌ನಿಜವಾದ ಅರ್ಥದಲ್ಲಿ‌ ಅಜಾತಶತ್ರು.  ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ‌ ನಾನೂ ಭಾಗಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇನ್ನೊಬ್ಬ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ  ಡಿ.ವಿ. ಸದಾನಂದ ಗೌಡ ಸಹ ಝಿರಿಯ ನಟನ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. 
ಅಂಬರೀಷ್ ತಮ್ಮ ಒಳ್ಳೆಯತನದಿಂದ ಎಲ್ಲರ ಅಣ್ಣ , ಎಲ್ಲರ ಸ್ನೇಹಿತ,ತಮ್ಮ ಹುಸಿ ಕೋಪ  ಮುನಿಸಿನಿಂದಲೇ ಲಕ್ಷಾಂತರ ಜನರ ಪ್ರೀತಿ ಸಂಪಾದಿಸಿದ್ದ ಅಣ್ಣ . ಚಿತ್ರನಟರಾಗಿ , ರಾಜಕಾರಣಿಯಾಗಿ , ಹಿರಿಯಣ್ಣರಾಗಿ ಬಾವುಕ ಪ್ರೀತಿ ತೋರಿಸಿದ್ದ ಸಹೃದಯಿ ಇನ್ನಿಲ್ಲವೆಂಬ  ಮಾತು ಅತ್ಯಂತ ಕಠಿಣ . ಅವರ ಅಗಲಿಕೆಯ ದುಃಖವನ್ನು ಬರಿಸಿವ ಶಕ್ತಿ ಎಲ್ಲರಿಗೂ ಭಗವಂತ ನೀಡಲಿ ಎನ್ನುವುದಾಗಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇನ್ನು ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟ ರಜನಿಕಾಂತ್ ಸಹ ಅಂಬರೀಶ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದು ಗೆಳೆಯನ ಸಾವಿಗೆ ಕಣ್ಣೀರಾಗಿದ್ದಾರೆ.
"ಅದ್ಭುತ ವ್ಯಕ್ತಿ, ಆಪ್ತ ಸ್ನೇಹಿತ, ನಿನ್ನನ್ನು ನಾನು ಕಳೆದುಕೊಂಡೆ...."ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.

ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಅಂಬರೀಶ್ ನಿಧನದಿಂದ ದುಃಖಿತರಾಗಿದ್ದು ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಕಾಂಗ್ರೆಸ್  ಹಿರಿಯ ಮುಖಂಡರಾದ ಡಾ. ಜಿ. ಪರಮೇಶ್ವರ್ ಹಾಗೂ ಡಿ.ಕೆ. ಶಿವಕುಮಾರ್ ಸಹ ಅಂಬರೀಶ್ ಸಾವಿಗಾಗಿ ತಮ್ಮ ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com