ಕಿಚ್ಚ ಸುದೀಪ್
ಸಿನಿಮಾ ಸುದ್ದಿ
ಅಂಬರೀಶ್ ನಿಧನ: ಭಾವನಾತ್ಮಕ ಪತ್ರದ ಮೂಲಕ ಅಂಬಿ ಮಾಮನ ನೆನೆದು ಕಣ್ಣೀರಾದ ಕಿಚ್ಚ ಸುದೀಪ್!
ರೆಬೆಲ್ ಸ್ಟಾರ್ ಅಂಬರೀಶ್ ಕೊನೆಯ ಚಿತ್ರ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ನಟಿಸಿದ್ದ ಕಿಚ್ಚ ಸುದೀಪ್ ಅಂಬಿ ಪಾರ್ಥಿವ ಶರೀರದ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತಿದ್ದರು...
ರೆಬೆಲ್ ಸ್ಟಾರ್ ಅಂಬರೀಶ್ ಕೊನೆಯ ಚಿತ್ರ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ನಟಿಸಿದ್ದ ಕಿಚ್ಚ ಸುದೀಪ್ ಅಂಬಿ ಪಾರ್ಥಿವ ಶರೀರದ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಬಳಿಕ ಅಂಬರೀಶ್ ಜೊತೆಗಿನ ತಮ್ಮ ಒಡನಾಟವನ್ನು ಭಾವನಾತ್ಮಕ ಪತ್ರವೊಂದರ ಮೂಲಕ ವ್ಯಕ್ತಪಡಿಸಿದ್ದಾರೆ.
ಅಂಬರೀಶ್ ವಿಧಿವಶರಾದ ಸಮಯದಿಂದ ಟ್ವೀಟರ್ ನಲ್ಲಿ ಮೌನ ತಾಳಿದ್ದ ಕಿಚ್ಚ ಕೊನೆಗೂ ತಮ್ಮ ಭಾವನೆಗಳನ್ನು ಪತ್ರವೊಂದರ ಮೂಲಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಬಾಲ್ಯದಲ್ಲಿ ಅಂಬರೀಶ್ ಜೊತೆಗೆ ತೆಗೆಸಿಕೊಂಡಿದ್ದ ಫೋಟೋ ಒಂದನ್ನು ಶೇರ್ ಮಾಡಿ ನಿಜಕ್ಕೂ ಅಂಬಿ ಅಗಲುವಿಕೆ ನೋವು ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ.
ಅಂಬಿ ಮಾಮನಿಗಾಗಿ ಪ್ರೀತಿಯ ದೀಪೂ ಪತ್ರವೊಂದನ್ನೂ ಬರೆದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಲೆಟರ್ ನಲ್ಲಿ ತಮ್ಮ ಹಾಗೂ ಅಂಬಿ ನಡುವಿನ ಬಾಂಧವ್ಯವನ್ನು ಹೊರ ಹಾಕಿದ್ದು ಓದುಗರನ್ನು ಭಾವುಕರನ್ನಾಗಿಸುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ