ಭಾರವಾದ ಹೃದಯದಿಂದ ಸಮಾಧಿ ಬಳಿ ಅಂಬರೀಷ್ ಚಿತ್ರ ಬರೆದ ಕಲಾವಿದ ವಿಕ್ಕಿ!

ಕಂಠೀರವ ಸ್ಟುಡಿಯೋದಲ್ಲಿ ನಟ ಅಂಬರೀಷ್ ಅವರ ಬೆಂಗಳೂರಿನ ಕಲಾವಿದ ಜಿ.ವಿಕ್ಕಿ ಸಮಾಧಿ ಸ್ಥಳದಲ್ಲಿ ಭಾವುಕರಾದರು.
ವಿಕ್ಕಿ ಬರೆದ ಅಂಬರೀಷ್ ಚಿತ್ರಗಳು
ವಿಕ್ಕಿ ಬರೆದ ಅಂಬರೀಷ್ ಚಿತ್ರಗಳು
ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿ ನಟ ಅಂಬರೀಷ್ ಅವರ ಬೆಂಗಳೂರಿನ ಕಲಾವಿದ ಜಿ.ವಿಕ್ಕಿ ಸಮಾಧಿ ಸ್ಥಳದಲ್ಲಿ ಭಾವುಕರಾದರು. ಅಂಬರೀಷ್ ಅವರು ಜೀವಂತವಾಗಿದ್ದಾಗ ಅವರ ಭಾವಚಿತ್ರ ಹಾಗೂ ಕಟೌಟ್ ಗಳನ್ನು ವಿಕ್ಕಿ ಬರೆಯುತ್ತಿದ್ದರು. ಆದರೆ ಸೋಮನವಾರ ಅಂಬರೀಷ್ ಚಿತ್ರ ಬರೆಯುವಾಗ ಅವರ ನೋವು ಅನುಭವಿಸುತ್ತಿದ್ದರು.
ತಮಿಳುನಾಡು ಮೂಲದ ವಿಕ್ಕಿ ಬೆಂಗಳೂರಿನಲ್ಲಿ ಆರ್ಟ್ ಎಜೆನ್ಸಿ ನಡೆಸುತ್ತಿದ್ದಾರೆ.10ನೇ ತರಗತಿ ಮುಗಿಸಿದ ಮೇಲೆ, ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದ ನಂತರ ನಾನು ಸಿನಿಮಾ ಪೋಸ್ಚರ್ ಮತ್ತು ಕಟೌಟ್ ಬರೆಯುವುದನ್ನು ಕಲಿಯಲು ಆರಂಭಿಸಿದರು, 18 ವರ್ಷ ವಯಸ್ಸಾದ ಮೇಲೆ ಬೆಂಗಳೂರಿಗೆ ಬಂದು ಕೆಲಸ ಮಾಡಲು ಆರಂಭಿಸಿದ್ದಾಗಿ ಹೇಳಿದ್ದಾರೆ.
ಅಂಬರೀಷ್ ಅವರ ಸಿನಿಮಾಗಳ ಹಲವು ದೊಡ್ಡ ದೊಡ್ಡ ಕಟೌಟ್ ಗಳನ್ನು ಬರೆದಿದ್ದಾರೆ, ಅವುಗಳನ್ನು ಥಿಯೇಟರ್ ಗಳ ಮುಂದೆ ವಿಕ್ಕಿ ಬರೆದ ಕಟೌಟ್ ಗಳಿರುತ್ತವೆ, ನಾನು ಚುನಾವಣೆ ಗಾಗಿಯೂ ಕಟೌಟ್ ಬರೆಯುತ್ತೇನೆ, ಅಂಬರೀಷ್ ಜೀವನದ ಮೂರು ಹಂತಗಳ ವಿಭಿನ್ನ ಚಿತ್ರಗಳನ್ನು ಬರೆದಿದ್ದಾರೆ,
ಸೂರ್ಯಸ್ತ ಆಗುತ್ತಿರುವ ಚಿತ್ರ, ಅವರ ಸಾವಿನ ಸಂಕೇತ, ಅದನ್ನು ಪೂರ್ಣಗೊಳಿಸಲು 2 ಗಂಟೆ ಸಮಯಾವಕಾಶ ಹಿಡಿಯಿತು, ಒಮ್ಮೆ ಅಂಬರೀಶ್ ಮಂಡ್ಯದಲ್ಲಿ ಕಟೌಟ್ ನೋಡಿ, ನನ್ನ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ನನ್ನ ಕೈ ಕುಲುಕಿದರು, ಅದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com