ಭಯೋತ್ಪಾದನೆಯಂತಹ ವ್ಯಾಪಕ ವಿಷಯವನ್ನು ಸಿನಿಮಾ ಮಾಡುವುದೇ ದೊಡ್ಡ ಸವಾಲು: ಪಿ.ಸಿ. ಶೇಖರ್

ಸ್ಯಾಂಡಲ್ ವುಡ್ ನಲ್ಲಿ ತೀವ್ರ ಸಂಚಲ ಮೂಡಿರಿಸುವ ನಟಿ ರಾಗಿಣಿ ಅಭಿನಯದ ಟೆರರಿಸ್ಟ್ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ...
ಟೆರರಿಸ್ಟ್ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ
ಟೆರರಿಸ್ಟ್ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ
ಸ್ಯಾಂಡಲ್ ವುಡ್ ನಲ್ಲಿ ತೀವ್ರ ಸಂಚಲ ಮೂಡಿರಿಸುವ ನಟಿ ರಾಗಿಣಿ ಅಭಿನಯದ ಟೆರರಿಸ್ಟ್ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. 
ಟೆರರಿಸ್ಟ್ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿದ್ದು, ಚಿತ್ರವನ್ನು ಯಾವ ಕಾರಣಕ್ಕೆ ನೋಡಬೇಕೆಂಬುದನ್ನು ನಿರ್ದೇಶಕ ಪಿ.ಸಿ.ಶೇಖರ್ ವಿವರಿಸಿದ್ದಾರೆ. 
ಕಥೆ ಹೆಣೆಯುವುದು ಅತ್ಯಂತ ಕಠಿಣವಾಗಿತ್ತು. ಭಯೋತ್ಪಾದನೆಯಂತಹ ವಿಸ್ತಾರವಾದ ವಿಷಯವನ್ನು ಸಣ್ಣ ಕಥೆಯಾಗಿಸಿ ಚಿತ್ರ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಭಯೋತ್ಪಾದನೆ ಅತ್ಯಂತ ವಿಸ್ತಾರವಾದ ವಿಚಾರವಾಗಿದೆ. ಇಂತಹ ವಿಷಯವನ್ನು ಎರಡು ಸಾಲುಗಳ ಕಥೆಯನ್ನಾಗಿಸಿ ಚಿತ್ರ ಕಥೆ ಬರೆಯುವುದು ಸುಲಭವಲ್ಲ. ನನ್ನ ಚಿತ್ರ ಭಾಷೆ ಹಾಗೂ ಧರ್ಮಕ್ಕೆ ಮೀರಿದ್ದು ಎಂದು ಹೇಳಿದ್ದಾರೆ. 
ರಾಗಿಣಿ ದ್ವಿವೇದಿಯವರಿಗೆ ಪ್ರಮುಖ ಪಾತ್ರ ನೀಡಲು ನಾನು ನಿರ್ಧರಿಸಿದ್ದೆ. ರಾಗಿಣಿಯವರನ್ನು ವಿಭಿನ್ನ ಪಾತ್ರದಲ್ಲಿ ತೋರಿಸಲು ನಿರ್ಧರಿಸಿದ್ದೆ. ಚಿತ್ರದ ಮೂಲಕ ಅವರ ನಟನೆಯ ಕಲೆ ಹೊರಗೆ ಬಂದಿದೆ. ಆಕೆಯ ವ್ಯಕ್ತಿತ್ವಕ್ಕೂ ಚಿತ್ರದ ಪಾತ್ರಕ್ಕೂ ಸಾಕಷ್ಟು ಭಿನ್ನತೆಗಳಿವೆ. ಚಿತ್ರದಲ್ಲಿ ಮುಸ್ಲಿಂ ಯುವತಿಯಾಗಿ ರಾಗಿಣಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ರಾಗಿಣಿಯವರು ಸಾಕಷ್ಟು ವರ್ಕೌಟ್ ಮಾಡಿದ್ದಾರೆ. ರಾಗಿಣಿಯವರನ್ನು ಹೊರತುಪಡಿಸಿದರೆ, ಚಿತ್ರದಲ್ಲಿ ನಟಿಸಿರುವ ಬಹುತೇಕರು ರಂಗಭೂಮಿ ಹಿನ್ನಲೆಯುಳ್ಳವರಾಗಿದ್ದಾರೆ. 
ಸಾಕಷ್ಟು ಸಿನಿಮಾಗಳು ಪುರುಷ ಪ್ರಧಾನವಾಗಿರುತ್ತದೆ. ಆದರೆ ನನ್ನ ಚಿತ್ರ ವಿಭಿನ್ನವಾಗಿದ್ದು, ಭಯೋತ್ಪಾದನೆ ಹಾಗೂ ಮಹಿಳೆಯ ನಡುವಿನ ಸಂಪರ್ಕದತ್ತ ಗಮನ ಹರಿಸಲಾಗಿದೆ. ಚಿತ್ರದಲ್ಲಿ ಆ್ಯಕ್ಷನ್, ಎಮೋಷನ್ ಹಾಗೂ ಲವ್ ಇದೆ. ಚಿತ್ರ ಕಥೆ ಬೆಳಿಗ್ಗೆ 10 ರಿಂದ 5 ಗಂಟೆಯವರೆಗೂ ಇದೆ. ಆದರೆ, ಸಾಕಷ್ಟು ಕತ್ತರಿ ಪ್ರಯೋಗ ಮಾಡುವ ಮೂಲಕ ಚಿತ್ರವನ್ನು 1 ಗಂಟೆ 55 ನಿಮಿಷಕ್ಕೆ ತಂದು ನಿಲ್ಲಿಸಿದ್ದೇವೆ. 
ಕೇವಲ ಡೈಲಾಗ್ ಗಳ ಮೂಲಕ ಜನರಲ್ಲಿ ಭೀತಿ ಹುಟ್ಟಿಸಲು ಸಾಧ್ಯವಿಲ್ಲ. ಸಂಗೀತ ಕೂಡ ಮುಖ್ಯವಾಗಿರುತ್ತದೆ. ಪ್ರದೀಪ್ ವರ್ಮಾ ಅವರು ಚಿತ್ರಕ್ಕಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ, ರಿರೆಕಾರ್ಡಿಂಗ್ ಚಿತ್ರದ ಆತ್ಮವೆಂದೇ ಹೇಳಬಹುದು. ಸಂಗೀತದ ಬಗ್ಗೆ ತಲೆಕೆಡಿಸಿಕೊಂಡಿದ್ದ ಸಂದರ್ಭದಲ್ಲಿ ನನ್ನ ಅಭಿರುಚಿಯನ್ನು ಕಂಡು ಹಿಡಿದು, 102 ದಿನಗಳ ಕಾಲ ಒಬ್ಬಂಟಿಯಾಗಿ ರೀ ರೆಕಾರ್ಡಿಂಗ್ ಮಾಡಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com