
ತಮಿಳು ಹಾಗೂ ತೆಲುಗಿನಲ್ಲಿ ಸಮಂತಾ ಅಕ್ಕಿನೆನಿ ಜೊತೆಗೆ ಯೂ-ಟರ್ನ್ ರಿಮೇಕ್ ಮಾಡಿದ ನಂತರ ನಿರ್ದೇಶಕ ಪವನ್ ಕುಮಾರ್ ಮುಂದೆ ಏನು ಮಾಡಲಿದ್ದಾರೆ ಎಂದು ಎಲ್ಲಾ ಸಿನಿ ಪ್ರಿಯರು ಕುತೂಹಲದಿಂದ ಕಾಯುತ್ತಿದ್ದಾರೆ.
ಪವನ್ ಕುಮಾರ್ ಸೈಲಾಂಟಾಗಿ ವಿದೇಶಿ ಚಿತ್ರವೊಂದನ್ನು ಒಪ್ಪಿಕೊಂಡಿರುವ ಬಗ್ಗೆ ಸಿನಿಮಾ ಎಕ್ಸ್ ಪ್ರೆಸ್ ಗೆ ಮಾಹಿತಿ ತಿಳಿದುಬಂದಿದೆ.
ಪವನ್ ಕುಮಾರ್ ಅವರ ಮುಂದಿನ ಚಿತ್ರ ಇಂಗ್ಲಿಷ್ ಹಾಗೂ ಭಾರತದ ಒಂದು ಭಾಷೆಯಲ್ಲಿ ಮೂಡಿಬರಲಿದ್ದು, ಇದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಪ್ರೋಡಕ್ಷನ್ ಹೌಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.
ಮುಂದಿನ ವರ್ಷದ ಮಾರ್ಚ್ ತಿಂಗಳಿನಿಂದ ಕೆಲಸ ಆರಂಭಿಸಲಾಗುವುದು ಎಂದು ಪವನ್ ಕುಮಾರ್ ತಿಳಿಸಿದ್ದಾರೆ.
ಆದಾಗ್ಯೂ, ಪವನ್ ಕುಮಾರ್ ವೆಬ್ ಸಿರೀಸ್ ಮಾಡುತ್ತಿದ್ದಾರೆಯೇ ಅಥವಾ ಚಲನಚಿತ್ರ ಮಾಡಲಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ. ಇದನ್ನು ಮುಂದಿನ ದಿನಗಳಲ್ಲಿ ಪ್ರೋಡಕ್ಷನ್ ಹೌಸ್ ನಿಂದಲೇ ತಿಳಿಯಬೇಕಾಗಿದೆ.
Advertisement