ನಟಿ ಶ್ರುತಿ ಪರವಾಗಿ ಮಾತನಾಡಿದ್ದ, ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಪ್ರಕಾಶ್ ರೈ ವಿರುದ್ಧ ಖಾರವಾಗಿ ಪ್ರತಿಕ್ರಯಿಸಿದ ಜಗ್ಗೇಶ್ "ಅರ್ಜುನ್ ಸರ್ಜಾ ಸ್ಲಂ ನಿಂದ ಬಂದಿದ್ದಾರೆ, ಪ್ರಕಾಶ್ ರೈ ಮಾತ್ರ ಸ್ವರ್ಗದಿಂದ ಬಂದಿದ್ದಾರೆ! ರೈ ಸಹ ಓರ್ವ ಜಂಟಲ್ ಮ್ಯಾನ್! ಸರ್ಜಾ 35 ವರ್ಷದಿಂದ ಚಿತ್ರರಂಗದಲ್ಲಿದ್ದು ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿದ್ದಾರೆ. ಇಂತಹವರ ಮೇಲೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ." ಎಂದರು.