ವಿಕ್ಟರಿ-2 ಮೂಲಕ ಸ್ಯಾಂಡಲ್ ವುಡ್ ಗೆ ಬಾಲಿವುಡ್ ಗಾಯಕಿ ದಿವ್ಯ ಕುಮಾರ್ ಎಂಟ್ರಿ

ಹಿನ್ನೆಲೆ ಗಾಯಕರನ್ನು ಗುರುತಿಸಿ ಅವಕಾಶ ಕೊಡಿಸುವ ವಿಷಯದಲ್ಲಿ ಸಾಕಷ್ಟು ವಿಭಿನ್ನವಾಗಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.
ವಿಕ್ಟರಿ-2 ಮೂಲಕ ಸ್ಯಾಂಡಲ್ ವುಡ್ ಗೆ ಬಾಲಿವುಡ್ ನ ಗಾಯಕಿ ದಿವ್ಯ ಕುಮಾರ್ ಎಂಟ್ರಿ
ವಿಕ್ಟರಿ-2 ಮೂಲಕ ಸ್ಯಾಂಡಲ್ ವುಡ್ ಗೆ ಬಾಲಿವುಡ್ ನ ಗಾಯಕಿ ದಿವ್ಯ ಕುಮಾರ್ ಎಂಟ್ರಿ
Updated on
ಹಿನ್ನೆಲೆ ಗಾಯಕರನ್ನು ಗುರುತಿಸಿ ಅವಕಾಶ ಕೊಡಿಸುವ ವಿಷಯದಲ್ಲಿ ಸಾಕಷ್ಟು ವಿಭಿನ್ನವಾಗಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ಸಂಚಿಂತ್ ಹೆಗ್ಡೆ, ಮೆಹಬೂಬ್, ಅರ್ಮಾನ್ ಮಲೀಕ್ ನಂತಹ ಹಿನ್ನೆಲೆ ಗಾಯಕರು ಸ್ಯಾಂಡಲ್ ವುಡ್ ಸಿನಿಮಾಗಳ ಹಾಡುಗಳನ್ನು ಹಾಡಲು ಕಾರಣರಾಗಿರುವ ಅರ್ಜುನ್ ಜನ್ಯ ಈಗ ವಿಕ್ಟರಿ-2 ಸಿನಿಮಾಕ್ಕಾಗಿ ಬಾಲಿವುಡ್ ಹಿನ್ನೆಲೆ ಗಾಯಕಿ ದಿವ್ಯ ಕುಮಾರ್ ಅವರನ್ನು ಕರೆ ತಂದಿದ್ದಾರೆ. 
ಭಾಗ್ ಮಿಲ್ಖಾ ಭಾಗ್, ಫೈಂಡಿಂಗ್ ಫಾನ್ನಿ ಸೇರಿದಂತೆ ಇನ್ನಿತರ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕಿಯಾಗಿದ್ದ ದಿವ್ಯ ಕುಮಾರ್ ಈಗ ಕನ್ನಡದ ವಿಕ್ಟರಿ ಸೀಕ್ವೆಲ್ ಗೆ ಕಂಠದಾನ ಮಾಡಲಿದ್ದಾರೆ. ಆ.30 ರಂದು ದಿವ್ಯಾ ಕುಮಾರ್ ವಿಕ್ಟರಿ-2 ಹಾಡನ್ನು ರೆಕಾರ್ಡ್ ಮಾಡುವುದಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು.  ದಿವ್ಯ ಕುಮಾರ್ ಹಾಡಿರುವ ಹಾಸ್ಯಭರಿತ ಡುಯೆಟ್  ಹಾಡಿಗೆ ಡಾ.ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. 
ಸಿನಿಮಾದ ನೇಟಿವಿಟಿಗೆ ತಕ್ಕಂತೆ ದಿವ್ಯ ಅವರ ಧ್ವನಿ ಹೊಂದುತ್ತದೆ ಎಂಡು ನಿರ್ದೇಶಕ ಹರಿ ಸಂತೋಶ್ ಹೇಳಿದ್ದಾರೆ.  ಪ್ಲೀಸ್ ಟ್ರಸ್ಟು ಹಾಡಿನ ವಿಡಿಯೋ ಸೆ.3 ರಂದು ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com