ಡಾ. ವಿಷ್ಮುವರ್ಧನ್ ನಿಷ್ಠಾವಂತ ಅಭಿಮಾನಿಯಾಗಿ ಶ್ರೇಯಸ್ ಮಂಜು ಬದಲು !

ಸ್ಯಾಂಡಲ್ ವುಡ್ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮಂಜು ಅವರ ಚೊಚ್ಚಲ ಚಿತ್ರ ಪಡ್ಡೆಹುಲಿಯಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಸಾಂಗ್ ವೊಂದನ್ನು ಅವರಿಗೆ ಸಮರ್ಪಿಸಲು ಚಿತ್ರ ನಿರ್ಮಾಪಕರು ನಿರ್ಧರಿಸಿದ್ದಾರೆ.
ಡಾ. ವಿಷ್ಣುವರ್ಧನ್
ಡಾ. ವಿಷ್ಣುವರ್ಧನ್
Updated on

ಸ್ಯಾಂಡಲ್ ವುಡ್  ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್  ಮಂಜು ಅವರ ಚೊಚ್ಚಲ ಚಿತ್ರ ಪಡ್ಡೆಹುಲಿಯಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಪಾತ್ರದಲ್ಲಿ  ಅಭಿನಯಿಸುತ್ತಿದ್ದು, ಸಾಂಗ್ ವೊಂದನ್ನು ಅವರಿಗೆ ಸಮರ್ಪಿಸಲು ಚಿತ್ರ ನಿರ್ಮಾಪಕರು ನಿರ್ಧರಿಸಿದ್ದಾರೆ.

ಗುರು ದೇಶಪಾಂಡೆ ನಿರ್ದೇಶಿಸಿರುವ ಈ ಸಾಂಗ್  ಇದೇ ತಿಂಗಳ 18 ರಂದು ವಿಷ್ಣುವರ್ಧನ್ ಜನ್ಮದಿನದಂದು   ಬಿಡುಗಡೆಯಾಗಲಿದೆ.

ಶ್ರೇಯಸ್ ಮಂಜು ಬಾಲ್ಯದಿಂದಲೂ ವಿಷ್ಣುವರ್ಧನ್ ಅವರನ್ನು ಮಾರ್ಗದರ್ಶಕರು ಅಂತಾ ಪರಿಗಣಿಸಿದ್ದಾರೆ.ಪಡ್ಡೆಹುಲಿ ಚಿತ್ರದ ಬಹುತೇಕ ಭಾಗ ಚಿತ್ರದುರ್ಗದಲ್ಲಿ ಚಿತ್ರೀಕರಣವಾಗಿದ್ದು, ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ರಾಂಪ್ ಸಾಂಗ್ ವೊಂದನ್ನು ಸಮರ್ಪಿಸಲಾಗುತ್ತಿದೆ ಎಂದು ಗುರುದೇಶಪಾಂಡೆ ಹೇಳಿದ್ದಾರೆ.

ಕಾರ್ತಿಕ್ ಈ ಗೀತೆಗೆ ಸಾಹಿತ್ಯ ಬರೆದಿದ್ದು, ಗೀತೆಯ ಟೀಸರ್ ಇಂದು ಬಿಡುಗಡೆಯಾಗಲಿದೆ. ವಿಷ್ಣುವರ್ಧನ್ ಅವರ ಜನ್ಮ ವಾರ್ಷಿಕೋತ್ಸವ ದಿನದಂದು  ಸಂಪೂರ್ಣ ಗೀತೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಿಶ್ ವಿಕಾ ನಾಯ್ಡು ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,  25 ವರ್ಷದ ನಂತರ ರವಿಚಂದ್ರನ್ ಹಾಗೂ ಸುಧಾರಾಣಿ  ಜೋಡಿಯಲ್ಲಿ  ಮತ್ತೆ  ಚಿತ್ರದಲ್ಲಿ ನೋಡಬಹುದಾಗಿದೆ. ಅಜನೀಶ್  ಬಿ. ಲೋಕನಾಥ್  ಸಂಗೀತ ಸಂಯೋಜಿಸುತ್ತಿದ್ದು,  ಕೆ. ಎಸ್ ಚಂದ್ರಶೇಖರ್ ಛಾಯಾಗ್ರಹಣ  ಹಾಗೂ ಕೆಎಂ ಪ್ರಕಾಶ್ ಸಂಕಲನ ಜವಾಬ್ದಾರಿ ಹೊತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com