'ಅಂಬಿ ನಿಂಗೆ ವಯಸ್ಸಾಯ್ತೊ' ನನ್ನ ಮಡಿಲ ಕೂಸು: ಗುರುದತ್ತ ಗಾಣಿಗ

ಗುರುದತ್ತ ಗಾಣಿಗ ನಿರ್ದೇಶನದ ಚೊಚ್ಚಲ ನಿರ್ದೇಶನದ ಚಿತ್ರ ಅಂಬಿ ನಿಂಗೆ ವಯಸ್ಸಾಯ್ತೊ ಮುಂದಿನ ವಾರ ...
ಚಿತ್ರದ ಒಂದು ದೃಶ್ಯ
ಚಿತ್ರದ ಒಂದು ದೃಶ್ಯ
Updated on

ಗುರುದತ್ತ ಗಾಣಿಗ ಅವರ ಚೊಚ್ಚಲ ನಿರ್ದೇಶನದ ಚಿತ್ರ ಅಂಬಿ ನಿಂಗೆ ವಯಸ್ಸಾಯ್ತೊ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ರೆಬೆಲ್ ಸ್ಟಾರ್ ಅಂಬರೀಷ್, ಕಿಚ್ಚ ಸುದೀಪ್ ರಂಥ ದೊಡ್ಡ ನಟರ ಚಿತ್ರವನ್ನು ಆರಂಭದಲ್ಲಿಯೇ ನಿರ್ದೇಶನದ ಮಾಡಿದ ಚಿತ್ರವಾದ ಕಾರಣ ಸಹಜವಾಗಿ ಕುತೂಹಲ ಸೃಷ್ಟಿಸಿದೆ. ನಿರ್ದೇಶಕರು ಕೂಡ ಕಾತರರಾಗಿದ್ದಾರೆ.

ಚಿತ್ರದಲ್ಲಿ ಸುಹಾಸಿನಿ ಮಣಿರತ್ನಂ ಮತ್ತು ಶೃತಿ ಹರಿಹರನ್ ರಂಥ ಪ್ರಮುಖ ನಟಿಯರು ಇದ್ದಾರೆ. ಈ ಸಂದರ್ಭದಲ್ಲಿ ನ್ಯೂಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಯೊಂದಿಗೆ ತಮ್ಮ ವೃತ್ತಿಜೀವನದ ಪಯಣವನ್ನು ಹಂಚಿಕೊಂಡಿದ್ದಾರೆ.

ನಾನು ದಶಕಗಳ ಕಾಲದ ಯಕ್ಷಗಾನ ಕಲೆಯ ಹಿನ್ನಲೆಯ ಕುಟುಂಬದಿಂದ ಬಂದವನು. ಬೆಳೆಯುತ್ತಾ ಹೋದಂತೆನನಗೆ ಸಹ ಯಕ್ಷಗಾನದಲ್ಲಿ ಆಸಕ್ತಿ ಮೂಡಿತು. ಒಂದು ಹಂತದಲ್ಲಿ ಸಿನಿಮಾ ಸೆಳೆಯಿತು. 16ನೇ ವಯಸ್ಸಿನಲ್ಲಿ ಕಲಿಕೆಯನ್ನು ನಿಲ್ಲಿಸಿ ಸಿನಿಮಾ ಕ್ಷೇತ್ರಕ್ಕೆ ಬಂದೆ. ಮೇಕಪ್ ಬಾಯ್ ಆಗಿ ಸಿನಿಮಾ ಉದ್ಯಮಕ್ಕೆ ಕಾಲಿಟ್ಟು ಹಲವು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಕಿಚ್ಚ ಸುದೀಪ್ ಅವರ ಪರಿಚಯವಾಯಿತು. ಅವರ ಬಳಿ ಸಹಾಯಕರಾಗಿ ಸೇರಿದೆ. ಅವರ ಜೊತೆ ಕೆಲಸ ಮಾಡುವಾಗಲೇ ಬರವಣಿಗೆ, ಜಾಹಿರಾತು ಮತ್ತು ಕಿರುಚಿತ್ರಗಳಲ್ಲಿ ಕೆಲಸ ಮಾಡಲಾರಂಭಿಸಿದೆ. ಟಿವಿ ಶೋದಲ್ಲಿ ಚರ್ಚೆ ನಡೆಸುತ್ತಿದ್ದ ವೇಳೆ ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರವನ್ನು ನಿರ್ದೇಶನ ಮಾಡಲು ಸುದೀಪ್ ಅವರೇ ಸೂಚಿಸಿದರು. ಆರಂಭದಲ್ಲಿ ಬೇರೆ ನಿರ್ದೇಶಕರು ಈ ಚಿತ್ರವನ್ನು ನಿರ್ದೇಶಿಸುವುದರಲ್ಲಿತ್ತು. ಕೊನೆಗೆ ನನ್ನ ಬಳಿ ಬಂದಿತು'' ಎಂದು ಹೇಳುತ್ತಾರೆ.

ಹೊಸಬರಾಗಿ ನನಗೆ ಸುದೀಪ್ ರಂಥ ದೊಡ್ಡ ನಟರ ಬೆಂಬಲ ಸಿಕ್ಕಿದೆ. ನನ್ನ ಜೊತೆ ಸುದೀಪ್ ಅವರ ಸಹೋದರಿ ಪುತ್ರ ಸಂಚಿತ್ ಸಂಜೀವ್, ಜಾಕ್ ಮಂಜು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ಜೆಬಿನ್ ಜಾಕೊಬ್ ಹಗಲಿರುಳು ಶ್ರಮಿಸಿದ್ದಾರೆ. ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರ ಪ್ರತಿಕ್ರಿಯೆ, ಸ್ಪಂದನೆ ಬಗ್ಗೆ ಇದಿರು ನೋಡುತ್ತಿದ್ದೇನೆ ಎನ್ನುತ್ತಾರೆ.

ರೆಬೆಲ್ ಸ್ಟಾರ್ ಅಂಬರೀಷ್ ಚಿತ್ರೋದ್ಯಮದಲ್ಲಿ ಇಷ್ಟು ವರ್ಷಗಳಿಂದ ಇದ್ದರೂ ಹಿರಿಯ ನಟರಾಗಿದ್ದರೂ ಕೂಡ ಸೆಟ್ ಗೆ ಹೊಸಬರಂತೆ ಬರುತ್ತಿದ್ದರು. ಸಲಹೆ, ಯೋಚನೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಿದ್ದರು. ಅವರು ಸೆಟ್ ನಲ್ಲಿ ಮುಕ್ತವಾಗಿದ್ದು ಎಲ್ಲರಿಗೂ ಸುಲಭಕರ ವಾತಾವರಣವನ್ನು ಸೃಷ್ಟಿಸಿದ್ದರು. ಅವರಿಂದ ಸಲಹೆಗಳನ್ನು ನಾವು ಕೂಡ ಕೇಳಿ ಪಡೆಯುತ್ತಿದ್ದೆವು ಎನ್ನುತ್ತಾರೆ ಗಾಣಿಗ.

ಇನ್ನು ಕಿಚ್ಚ ಸುದೀಪ್ ಅವರು ಈ ಚಿತ್ರಕ್ಕೆ ನಿರ್ಮಾಪಕರು ಮಾತ್ರವಲ್ಲದೆ ಕ್ರಿಯೇಟಿವ್ ಟೀಮ್ ನಲ್ಲಿ ಕೂಡ ಇದ್ದರು. ಅವರು ನಮಗೊಂದು ಚಿತ್ರಕ್ಕೆ ಶಕ್ತಿಯಾಗಿ, ಸ್ಪೂರ್ತಿಯಾಗಿ ನಿಂತಿದ್ದರು. ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅವರ ಅಳಿಯ ಧನುಷ್ ಕೂಡ ಚಿತ್ರ ವೀಕ್ಷಿಸುವ ನಿರೀಕ್ಷೆಯಿದೆ ಎನ್ನುತ್ತಾರೆ ಗುರುದತ್ತ ಗಾಣಿಗ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com