ಕಾರು ಅಪಘಾತ: ಆಸ್ಪತ್ರೆಯಿಂದ ದೇವರಾಜ್, ಪ್ರಜ್ವಲ್ ಡಿಸ್ಚಾರ್ಜ್

ಕಾರು ಅಪಘಾತದಲ್ಲಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ದೇವರಾಜ್ ಹಾಗೂ...
ದೇವರಾಜ್, ಪ್ರಜ್ವಲ್
ದೇವರಾಜ್, ಪ್ರಜ್ವಲ್
Updated on
ಮೈಸೂರು: ಕಾರು ಅಪಘಾತದಲ್ಲಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ದೇವರಾಜ್ ಹಾಗೂ ಅವರ ಪುತ್ರ ಪ್ರಜ್ವಲ್ ದೇವರಾಜ್ ಅವರು ಮಂಗಳವಾರ ಡಿಸ್ಚಾರ್ಜ್ ಆಗಿದ್ದಾರೆ.
ಡಿಸ್ಚಾರ್ಜ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವರಾಜ್ ಅವರು​, ಹುಟ್ಟು ಹಬ್ಬದ ಸೆಲಬ್ರೆಷನ್ ಮಧ್ಯಾಹ್ನವೇ ಮುಗಿದಿತ್ತು. ರಾತ್ರಿ ಸ್ನೇಹಿತರ ಮನೆಗೆ ಊಟಕ್ಕೆ ತೆರಳಿದ್ದೇವು. ಊಟ ಮುಗಿಸಿ ವಾಪಸ್​ ಬರುವಾರ ಕಾರು ಸ್ಕಿಡ್ ಆಗಿ ಅಪಘಾತವಾಗಿದೆ. ಅದೃಷ್ಟವಶಾತ್​ ಯಾರಿಗೂ ಗಂಭೀರ ತೊಂದರೆಯಾಗಿಲ್ಲ. 10 ದಿನಗಳ ಕಾಲ ವಿಶ್ರಾಂತಿ ಪೆಡೆಯಲು ವೈದ್ಯರು ಸೂಚಿಸಿದ್ದಾರೆ ಎಂದರು.
ನಟ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ಪ್ರಯಾಣಿಸುತ್ತಿದ್ದ ಕಾರು ಸೋಮವಾರ ಬೆಳಗ್ಗೆ ಮೈಸೂರಿನ ಹೊರವಲಯದ ರಿಂಗ್ ರೋಡ್ ನಲ್ಲಿ ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ಗಾಯಗೊಂಡಿದ್ದ ಈ ಮೂವರು ನಟರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಬಳಿಕ ದೇವರಾಜ್ ಹಾಗೂ ಪುತ್ರ ಪ್ರಜ್ವಲ್ ದೇವರಾಜ್ ಡಿಸ್ಚಾರ್ಜ್ ಆಗಿದ್ದು, ದರ್ಶನ್ ಇನ್ನೂ ಆಸ್ಪತ್ರೆಯಲ್ಲಿದ್ದಾರೆ.
ನಟ ದೇವರಾಜ್ ಗೆ ಎಡಗೈಗೆ ಪೆಟ್ಟಾಗಿದ್ದು, ಬ್ಯಾಂಡೇಜ್ ಮಾಡಲಾಗಿದೆ. ಪುತ್ರ ಪ್ರಜ್ವಲ್ ದೇವರಾಜ್​ಗೆ ಎಡಗೈ ಹಾಗೂ ಎಡಭಾಗದ ಹಣೆಗೆ ಸಣ್ಣ ಪೆಟ್ಟಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com