ದಾರಿ ತಪ್ಪಿದ ಮಗ ಚಿತ್ರದಲ್ಲಿ ಧೀರೆನ್ ಫಸ್ಟ್ ಲುಕ್ ಔಟ್!

ವರನಟ ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿರುವ ಧೀರೆನ್ ಅಭಿನಯದ ದಾರಿ ತಪ್ಪಿದ ಮಗ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಧೀರೆನ್-ಮಾನ್ವಿತಾ ಕಾಮತ್
ಧೀರೆನ್-ಮಾನ್ವಿತಾ ಕಾಮತ್
ವರನಟ ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿರುವ ಧೀರೆನ್ ಅಭಿನಯದ ದಾರಿ ತಪ್ಪಿದ ಮಗ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಪೂರ್ಣಿಮಾ ಮತ್ತು ರಾಮ್ ಕುಮಾರ್ ದಂಪತಿ ಪುತ್ರ ಧೀರೆನ್ ಸಹ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು ಅನಿಲ್ ಕುಮಾರ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಚಿತ್ರದಲ್ಲಿ ಧೀರೆನ್ ಉದ್ದನೆಯ ಗಡ್ಡ ಬಿಟ್ಟು ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 1975ರಲ್ಲಿ ತನ್ನ ತಾತ ಡಾ.ರಾಜ್ ಕುಮಾರ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ದಾರಿ ತಪ್ಪಿದ ಮಗ ಸಿನಿಮಾ ಟೈಟಲ್ ನಲ್ಲೇ ಧೀರೆನ್ ಎಂಟ್ರಿ ಕೊಡುತ್ತಿದ್ದು ಚಿತ್ರದ ಕುರಿತ ನಿರೀಕ್ಷೆಗಳು ಹೆಚ್ಚಾಗಿವೆ.
ಧೀರೆನ್ ಗೆ ಜೋಡಿಯಾಗಿ ಮಾನ್ವಿತಾ ಕಾಮತ್ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು ಶಿವು ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com