ಮಹೇಶ್ ಬಾಬು ನಿರ್ದೇಶನದ ಚಿತ್ರಕ್ಕೆ 'ಅಪರೂಪ' ಶೀರ್ಷಿಕೆ!

ನಿರ್ದೇಶಕ ಮಹೇಶ್ ಬಾಬು ಅವರು ಹೊಸಬರನ್ನು ಇಟ್ಟುಕೊಂಡು ಚಿತ್ರ ನಿರ್ದೇಶನ ಮಾಡುತ್ತಿದ್ದು ಇದಕ್ಕೆ ಅಪರೂಪ ಎಂದು ಶೀರ್ಷಿಕೆ ಇಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನಿರ್ದೇಶಕ ಮಹೇಶ್ ಬಾಬು ಅವರು ಹೊಸಬರನ್ನು ಇಟ್ಟುಕೊಂಡು ಚಿತ್ರ ನಿರ್ದೇಶನ ಮಾಡುತ್ತಿದ್ದು ಇದಕ್ಕೆ ಅಪರೂಪ ಎಂದು ಶೀರ್ಷಿಕೆ ಇಡಲಾಗಿದೆ. 
ನನ್ನ ತಲೆಯಲ್ಲಿ ನಾಲ್ಕೈದು ಶೀರ್ಷಿಕೆಗಳು ಸುಳಿದಾಡುತ್ತಿತ್ತು. ಕೊನೆಗೆ ಅಪರೂಪ ಚಿತ್ರದ ಶೀರ್ಷಿಕೆಯನ್ನೇ ಫೈನಲ್ ಮಾಡಿ ಫಿಲ್ಮಂ ಚೇಂಬರ್ ನಲ್ಲಿ ರಿಜಿಸ್ಟರ್ ಮಾಡಿಸಲಾಯಿತು ಎಂದು ನಿರ್ದೇಶಕ ಮಹೇಶ್ ಬಾಬು ಹೇಳಿದ್ದಾರೆ.
ಈ ಚಿತ್ರದ ಮೂಲಕ ಸಾಫ್ಟ್ ವೇರ್ ಉದ್ಯೋಗಿ ಸುಘೋಷ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಕೃತಿಕಾ ನವ ನಟಿ ಸಹ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸದ್ಯ ಶೇಕಡ 25ರಷ್ಟು ಭಾಗ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರಕ್ಕೆ ಪ್ರಜ್ವಲ್ ಪೈ ಸಂಗೀತ ಸಂಯೋಜಿಸುತ್ತಿದ್ದು ಸೂರ್ಯಕಾಂತ್ ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com