4 ವರ್ಷದ ನಂತರ 'ಕೆಂಪೇಗೌಡ-2' ಮೂಲಕ ಮರಳುತ್ತಿದ್ದಾರೆ ಕೋಮಲ್

ತಮ್ಮ ಕಚಗುಳಿ ಇಡುವ ಕಾಮಿಡಿ ಮೂಲಕ ನಕ್ಕು ನಗಿಸುತ್ತಿದ್ದ ಕೋಮಲ್‌ ಕುಮಾರ್‌ ಆ್ಯಕ್ಷನ್‌ ಅವತಾರ ತಾಳಿದ್ದ ಕೆಂಪೇಗೌಡ-2 ಚಿತ್ರದ ಟ್ರೇಲರ್‌ ಭಾನುವಾರ ಬಿಡುಗಡೆಯಾಗುತ್ತಿದ್ದು, ..
ಕೋಮಲ್ ಕುಮಾರ್
ಕೋಮಲ್ ಕುಮಾರ್
Updated on
ತಮ್ಮ ಕಚಗುಳಿ ಇಡುವ ಕಾಮಿಡಿ ಮೂಲಕ ನಕ್ಕು ನಗಿಸುತ್ತಿದ್ದ ಕೋಮಲ್‌ ಕುಮಾರ್‌ ಆ್ಯಕ್ಷನ್‌ ಅವತಾರ ತಾಳಿದ್ದ ಕೆಂಪೇಗೌಡ-2 ಚಿತ್ರದ ಟ್ರೇಲರ್‌ ಭಾನುವಾರ ಬಿಡುಗಡೆಯಾಗುತ್ತಿದ್ದು, ಇದು ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲೇ ಒಂದು ಹೊಸ ಮತ್ತು ಒಳ್ಳೆಯ ಪ್ರಯತ್ನ ಎಂದು ಕೋಮಲ್ ಹೇಳಿದ್ದಾರೆ.
ನಾನು ತೆರೆ ಮೇಲೆ ಬಂದು ನಾಲ್ಕು ವರ್ಷಗಳೇ ಕಳೆದಿವೆ.  ಇದು ನನ್ನ ಸೆಕೆಂಡ್ ಇನ್ನಿಂಗ್ಸ್.  ಒಂದು ಸಿನಿಮಾ ನಿರ್ಮಾಣ ಮಾಡಿ ಬಿಡುಗಡೆ ಮಾಡುವ ಹೊತ್ತಿಗೆ ಹೈರಾಣಾಗಿ ಬಿಡುತ್ತಾರೆ. ಆದರೆ ನಾವು ಕೆಂಪೇಗೌಡ-2 ಚಿತ್ರ ಮಾಡಿ ಮುಗಿಸಿದ್ದೇವೆ. ಆದರೆ ಇದುವರೆಗೂ ಸುಸ್ತು ಅನ್ನುವುದೇ ಆಗಿಲ್ಲ. ಸಾಕಷ್ಟು ಜನ ಯಾಕೆ ಲೇಟಾಯಿತು ಎಂದು ಕೇಳಿದ್ದರು. ಅದಕ್ಕೆ ನಾನು ಕೊಡುವ ಉತ್ತರ ಸಾಕಷ್ಟು ಜನ ಧರ್ಮಸ್ಥಳಕ್ಕೆ ಕಾರಿನಲ್ಲಿ ಬಸ್ಸಿನಲ್ಲಿ ಹೋಗುತ್ತಾರೆ, ನಾವು ಪಾದಯಾತ್ರೆಯಲ್ಲಿ ಹೋಗಿದ್ದೇವೆ. ಹಾಗಾಗಿ ತಡವಾಗಿದೆ. 
ಈಗ ಏಪ್ರಿಲ್ 14 ರಂದು ಟ್ರೇಲರ್‌ ಬಿಡುಗಡೆ ಆಗುತ್ತಿದೆ,. ಅದು ಖಂಡಿತಾ ಜನರಿಗೆ ಇಷ್ಟವಾಗುತ್ತದೆ' ಎನ್ನುತ್ತಾರೆ ಕೋಮಲ್‌. ಶಂಕರೇಗೌಡ ನಿರ್ದೇಶನದ ಈ ಸಿನಿಮಾದಲ್ಲಿ ರಿಶಿಕಾ ಶರ್ಮ ನಾಯಕಿಯಾಗಿ ನಟಿಸಿದ್ದಾರೆ. 
ನಾನು ದೊಡ್ಡ ಗ್ಯಾಪ್‌ ತೆಗೆದುಕೊಂಡರೂ ಹೊಸ ರೀತಿಯ ಪ್ರಯತ್ನದ ಮೂಲಕ ಬರುತ್ತಿದ್ದೇನೆ. ಪಾತ್ರ, ಕಥೆ ಬಹಳ ಸೊಗಸಾಗಿದೆ. ಪ್ರೇಕ್ಷಕರಿಗೆ ಬಹಳ ಇಷ್ಟವಾಗುವಂಥ ಅನೇಕ ಅಂಶ ಈ ಸಿನಿಮಾದಲ್ಲಿವೆ. 
2012ರಲ್ಲಿ ಸುದೀಪ್ ಮತ್ತು ರಾಗಿಣಿ ದ್ವಿವೇದಿ ಅಭಿನಯದ ಕೆಂಪೇಗೌಡ ಸಿನಿಮಾ ರಿಲೀಸ್ ಆಗಿತ್ತು, ಗೋವಿಂದಾಯ ನಮಃ ಸಿನಿಮಾ ನಾಯಕ ನಟ ಕೋಮಲ್ ಕೆಂಪೇಗೌಡ-2 ಸಿನಿಮಾದಲ್ಲಿ ನಟಿಯಿಸಿದ್ದಾರೆ. ರಿಷಿಕಾ ಶರ್ಮಾ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com