ಕ್ರೇಜಿಸ್ಟಾರ್ ಪುತ್ರನ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ!

ಚಾಲೆಂಜಿಂಗ್ ಸ್ಟಾರ್ ಅಭಿನಯ ಮಾತ್ರವಲ್ಲ ವಾಯ್ಸ್ ಗೂ ಪ್ರೇಕ್ಷಕರು ಫಿದಾ ಆಗಿದ್ದಾರೆ ಹೀಗಾಗಿಯೇ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ‘ಪ್ರಾರಂಭ’ ಚಿತ್ರದಲ್ಲಿ ಅವರ ಧ್ವನಿಯನ್ನು ಬಳಸಿಕೊಳ್ಳಲಾಗಿದೆಯಂತೆ
ಕ್ರೇಜಿಸ್ಟಾರ್ ಪುತ್ರನ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ!
ಕ್ರೇಜಿಸ್ಟಾರ್ ಪುತ್ರನ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ!
Updated on

ಚಾಲೆಂಜಿಂಗ್ ಸ್ಟಾರ್ ಅಭಿನಯ ಮಾತ್ರವಲ್ಲ ವಾಯ್ಸ್ ಗೂ ಪ್ರೇಕ್ಷಕರು ಫಿದಾ ಆಗಿದ್ದಾರೆ ಹೀಗಾಗಿಯೇ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ‘ಪ್ರಾರಂಭ’ ಚಿತ್ರದಲ್ಲಿ ಅವರ ಧ್ವನಿಯನ್ನು ಬಳಸಿಕೊಳ್ಳಲಾಗಿದೆಯಂತೆ

ಮನೋರಂಜನ್ ಅಭಿನಯದ 'ಪ್ರಾರಂಭ' ಚಿತ್ರದಲ್ಲಿ ದರ್ಶನ್ ಅತಿಥಿ ನಟರಾಗಿ ಕಾಣಿಸಿಕೊಳ್ಳಬಹುದು ಎಂಬ ಮಾತು ಗಾಂಧಿನಗರದಲ್ಲಿ ಕೇಳಿಬಂದಿತ್ತು ಆದರೆ ಇದೀಗ ದರ್ಶನ್ ಅಭಿನಯಿಸಿಲ್ಲ, ಕೇವಲ ಧ್ವನಿ ಕೇಳಿಸಲಿದೆ ಎಂಬುದು ಖಚಿತವಾಗಿದೆ.

ಸದ್ಯ ಪ್ರಾರಂಭಚಿತ್ರದ ಡಬ್ಬಿಂಗ್ ಕೆಲಸ ನಡೆದಿದ್ದು ಈ ರೊಮ್ಯಾಂಟಿಕ್ ಚಿತ್ರದ ಟೀಸರ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿದ್ದಾರೆ. ಟೀಸರ್ ಇದೇ 23 ರಂದು ಬಿಡುಗಡೆಯಾಗಲಿದೆ ಎಂದು ಮೂಲಗಳು ಹೇಳಿದೆ.

ಮನು ಕಲ್ಯಾಡಿ ನಿರ್ದೇಶನದ ಈ ಚಿತ್ರದಲ್ಲಿ ಮನೋರಂಜನ್ ಗೆ ಜೋಡಿಯಾಗಿ ಕೀರ್ತಿ ಇದ್ದರೆ ಕಡ್ಡಿಪುಡಿ ಚಂದ್ರು, ಹನುಮಂತೇ ಗೌಡ, ಸೂರಜ್ ಕೂಡಾ ತೆರೆ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com