ಮಂಜಿನ ನಗರಿಯಲ್ಲಿ ಕಣ್ಸನ್ನೆ ಬೆಡಗಿ; ಸೆಲ್ಫಿಗಾಗಿ ಮುಗಿಬಿದ್ದ ಜನ!

ಕಣ್ಸನ್ನೆಯಿಂದಲೇ ಸುದ್ದಿಯಾಗಿದ್ದ ಮಲಯಾಳಂ ನಟಿ ಪ್ರಿಯಾ ವಾರಿಯರ್ ಇತ್ತೀಚೆಗೆ ಕೊಡಗಿನ ನಿಸರ್ಗಧಾಮಕ್ಕೆ ಭೇಟಿ ನೀಡಿದ್ದರು.
ಪ್ರಿಯಾ ವಾರಿಯರ್
ಪ್ರಿಯಾ ವಾರಿಯರ್
Updated on

ಮಡಿಕೇರಿ: ಕಣ್ಸನ್ನೆಯಿಂದಲೇ ಸುದ್ದಿಯಾಗಿದ್ದ ಮಲಯಾಳಂ ನಟಿ ಪ್ರಿಯಾ ವಾರಿಯರ್ ಇತ್ತೀಚೆಗೆ ಕೊಡಗಿನ ನಿಸರ್ಗಧಾಮಕ್ಕೆ ಭೇಟಿ ನೀಡಿದ್ದರು.

ನೆರೆ ಪ್ರವಾಹದ ಗುಂಗಿನಿಂದ ಪ್ರವಾಸಿಗರನ್ನು ಹೊರತರಲು ಕುಶಾಲನಗರದ ನಿಸರ್ಗಧಾಮ ಕೇಂದ್ರ ನೀಡಿದ್ದ ಆಹ್ವಾನದ ಹಿನ್ನೆಲೆಯಲ್ಲಿ ಅವರು ಈ ಭೇಟಿ ನೀಡಿದ್ದರು.

ಈ ವೇಳೆ ಮಾತನಾಡಿದ ಪ್ರಿಯಾ, ಕೊಡಗು ಈಗ ಸಹಜ ಸ್ಥಿತಿಯಲ್ಲಿದೆ. ಎಲ್ಲರೂ ಬಂದು ಪ್ರಕೃತಿಯ ಸೌಂದರ್ಯ ಸವಿಯಿರಿ” ಎಂದು ಕರೆ ನೀಡಿದರು. ಮುಂದೆ ಬಿಡುಗಡೆಯಾಗಲಿರುವ ತಮ್ಮ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಹಿಂದಿ, ತೆಲುಗು ಹಾಗೂ ಕನ್ನಡ ಚಿತ್ರದಲ್ಲಿ ಸಿನಿಮಾ ಮಾಡುತ್ತಿದ್ದೇನೆ. ಅಭಿಮಾನಿಗಳು ಅಡಾರ್ ಲವ್ ಮಲಯಾಳಂ ಚಿತ್ರಕ್ಕೆ ನೀಡಿದ ಬೆಂಬಲವನ್ನು ಮುಂದಿನ ಸಿನಿಮಾಗಳಿಗೂ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com