ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಯನದ 50ನೇ ಚಿತ್ರ ಕುರುಕ್ಷೇತ್ರ ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾದ ಮೂರನೇ ವಾರದಲ್ಲೇ ಶತ ಕೋಟಿ ಗಳಿಸಿ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದೆ.
ಇದೇ ಖುಷಿಯಲ್ಲಿ ದರ್ಶನ್ 100 ಕೋಟಿ ಎಂದು ಬರೆದಿರೋ ಕೇಕ್ ನ್ನು ಕತ್ತರಿಸಿ ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕೆಸಿಎನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಮುನಿರತ್ನ ನಿರ್ಮಿಸಿ ನಾಗಣ್ಣ ನಿರ್ದೇಶಿಸಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಂಬರೀಷ್, ವಿ. ರವಿಚಂದ್ರನ್, ಅರ್ಜುನ್ ಸರ್ಜಾ, ರವಿಶಂಕರ್, ಸೋನು ಸೋದ್, ಡ್ಯಾನಿಷ್ ಅಖ್ತರ್ ಸಫಿ, ನಿಖಿಲ್ ಕುಮಾರ್, ಮೇಘನ ರಾಜ್, ಶ್ರೀನಿವಾಸ್ ಮೂರ್ತಿ ಮತ್ತಿತರರ ದಂಡೇ ಇದೆ.
ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾದ ಈ ಚಿತ್ರ ಅಂದು 8. 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನವಾದ ಶನಿವಾರ 7.30 ಕೋಟಿ, ಮೂರನೇ ದಿನವಾದ ಭಾನುವಾರ 8.70 ಕೋಟಿ ಭರ್ಜರಿ ಮೊತ್ತ ಕಲೆ ಹಾಕಿತು. ಸೋಮವಾರ ಬಕ್ರೀದ್ ಹಬ್ಬವಾದರಿಂದ ಅಂದು ಕೂಡಾ ಸುಮಾರು 5.30 ಕೋಟಿ ರೂಪಾಯಿಯನ್ನು ಕೊಳ್ಳೆ ಹೊಡೆದಿದೆ. ಈ ಮೂಲಕ ಬಿಡುಗಡೆಯಾದ ಮೊದಲ ನಾಲ್ಕು ದಿನದಲ್ಲಿ 29. 50 ಕೋಟಿ ರೂಪಾಯಿಯನ್ನು ಕುರುಕ್ಷೇತ್ರ ಬಾಚಿಕೊಂಡಿದೆ.
ತೆಲುಗು ಆವೃತ್ತಿಯಲ್ಲಿ 0.80 ವಿದೇಶಗಳಲ್ಲಿ 1.50 ಕೋಟಿ ಸೇರಿದಂತೆ ದೇಶಾದ್ಯಂತ ಒಟ್ಟಾರೇ 34. 80 ಕೋಟಿ ರೂಪಾಯಿಯನ್ನು ಕುರುಕ್ಷೇತ್ರ ಕಲೆಕ್ಷನ್ ಮಾಡಿದೆ.
Advertisement