'ಒಡೆಯ' ಬಿಡುಗಡೆ: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ದರ್ಶನ್ ಅಭಿಮಾನಿಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಯನದ ಬಹು ನಿರೀಕ್ಷಿತ ಒಡೆಯ ಚಿತ್ರ  ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಉಂಟುಮಾಡಿದೆ. 
ದರ್ಶನ್
ದರ್ಶನ್
Updated on

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಯನದ ಬಹು ನಿರೀಕ್ಷಿತ ಒಡೆಯ ಚಿತ್ರ  ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಉಂಟುಮಾಡಿದೆ. 

ಇದು ಈ ವರ್ಷ ಬಿಡುಗಡೆಯಾಗುತ್ತಿರುವ ದರ್ಶನ್ ಅವರ ಮೂರನೇ ಚಿತ್ರವಾಗಿದ್ದು, ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದಾರೆ. ಮಾರ್ಚ್ ತಿಂಗಳಲ್ಲಿ ಯಜಮಾನ, ಆಗಸ್ಟ್ ತಿಂಗಳಲ್ಲಿ ಕುರುಕ್ಷೇತ್ರ ಚಿತ್ರಗಳು ಬಿಡುಗಡೆಯಾಗಿದ್ದವು.

ಯಜಮಾನ ಹಾಗೂ ಕುರುಕ್ಷೇತ್ರ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡಿದ್ದು, ಒಡೆಯ ಚಿತ್ರವೂ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ ಡಿಬಾಸ್ ಅಭಿಮಾನಿಗಳು.
 
ದರ್ಶನ್ ಅವರ ಬೃಹದಾಕಾರದ ಕಟೌಟ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದು, ಪಟಾಕಿ ಸಿಡಿಸುವ ಮೂಲಕ ಅಭಿಮಾನಿಗಳು ಸಡಗರ, ಸಂಭ್ರಮದಿಂದ ಒಡೆಯನನ್ನು ಬರಮಾಡಿಕೊಂಡಿದ್ದಾರೆ.

ನಿರ್ಮಾಪಕ ಸಂದೇಶ್ ನಾಗರಾಜ್, ನಿರ್ದೇಶಕ ಎಂಡಿ ಶ್ರೀಧರ್ ಹಾಗೂ ನಟ ದರ್ಶನ್ ಕಾಂಬಿನೇಷ್ ನ ಮೂರನೇ ಚಿತ್ರ ಇದಾಗಿದ್ದು, ತಮಿಳು ಚಿತ್ರ ವೀರಂ ರಿಮೇಕ್ ಆಗಿದೆ. 

ಈ ಹಿಂದೆ ನಿರ್ದೇಶಿಸಿದ್ದ ಪೊರ್ಕಿ ಹಾಗೂ ಬುಲ್ ಬುಲ್ ಚಿತ್ರಗಳು ಶತದಿನ ಆಚರಿಸುವ ಮೂಲಕ ಉತ್ತಮ ಪ್ರದರ್ಶನ ಕಂಡಿದ್ದವು. ಹಾಗಾಗಿ ಮತ್ತೆ ಒಟ್ಟಾಗಿ ಸೇರಿ ಸಿನಿಮಾ ಮಾಡಿರುವುದಾಗಿ ನಿರ್ದೇಶಕ ಎಂಡಿ ಶ್ರೀಧರ್ ಹೇಳುತ್ತಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದು, ಕೃಷ್ಣ ಕುಮಾರ್ ಅವರ ಛಾಯಾಗ್ರಾಹಣವಿದೆ.  ಸನಾ ತಿಮ್ಮಯ್ಯ , ರವಿಶಂಕರ್, ನಿರಂಜನ್, ದೇವರಾಜ್ , ಸಾಧು ಕೋಕಿಲ, ಚಿಕ್ಕಣ್ಣ ಮತ್ತಿತರ ತಾರಾಬಳಗವಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com