69 ವಸಂತಕ್ಕೆ ಕಾಲಿಟ್ಟ ತಲೈವಾ: ರಜನಿ ಪುತ್ರಿಯರಿಂದ ಹೃದಯ ಸ್ಪರ್ಶಿ ಶುಭಾಶಯ!

ಸೂಪರ್ ಸ್ಟಾರ್ ರಜನಿಕಾಂತ್ ಗೆ  69ನೇ ಹುಟ್ಟುಹಬ್ಬದ ಸಂಭ್ರಮ. ತಲೈವಾಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಅವರ ಅಭಿಮಾನಿಗಳು ವಿವಿಧ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
ಪತ್ನಿ, ಪುತ್ರಿಯರೊಂದಿಗೆ ರಜನಿಕಾಂತ್
ಪತ್ನಿ, ಪುತ್ರಿಯರೊಂದಿಗೆ ರಜನಿಕಾಂತ್
Updated on

ನವ ದೆಹಲಿ:  ಸೂಪರ್ ಸ್ಟಾರ್ ರಜನಿಕಾಂತ್ ಗೆ  69ನೇ ಹುಟ್ಟುಹಬ್ಬದ ಸಂಭ್ರಮ. ತಲೈವಾಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಅವರ ಅಭಿಮಾನಿಗಳು ವಿವಿಧ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ಈ ನಡುವೆ ರಜನಿಕಾಂತ್ ಪುತ್ರಿಯರಾದ ಐಶ್ವರ್ಯಾ ಹಾಗೂ ಸೌಂದರ್ಯ  ತಮ್ಮ ಇನ್ಸಾಟಾಗ್ರಾಮ್ ನಲ್ಲಿ ಹೃದಯ ಸ್ಪರ್ಶಿ ಶುಭಾಶಯ ಕೋರಿದ್ದಾರೆ.

ರಜನಿಕಾಂತ್ ಅವರ ದೊಡ್ಡ ಮಗಳು ಐಶ್ವರ್ಯಾ,   ತಮ್ಮ ತಂದೆಯ  ವಿಶೇಷ ಪೋಟೋವೊಂದನ್ನು ಹಂಚಿಕೊಳ್ಳುವ ಮೂಲಕ 'ಎಂದೆಂದಿಂಗೂ ತಮ್ಮನ್ನು ಅನುಸರಿಸುವುದಾಗಿ' ತಿಳಿಸಿದ್ದಾರೆ.

 
 
 
 
 
 
 
 
 
 
 
 
 

Will follow forever ... just to see that smile .. happy birthday Appa!

A post shared by Aishwaryaa R Dhanush (@aishwaryaa_r_dhanush) on

ಚಿಕ್ಕ ಮಗಳು ಸೌಂದರ್ಯ, ತಮ್ಮ ತಂದೆಯ ಜೊತೆಗಿನ ಪೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ತಂದೆಗೆ ಹುಟ್ಟಹುಬ್ಬದ ಶುಭಾಶಯ ಕೋರಿದ್ದಾರೆ.

View this post on Instagram

Happy birthday my life my father... My everything!!

A post shared by Soundarya Rajinikanth (@soundaryaarajinikant) on

ಕಳೆದ ವರ್ಷ ರಾಜಕೀಯಕ್ಕೆ ಎಂಟ್ರಿ ನೀಡಿದ ರಜನಿಕಾಂತ್ , 2021ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೊಸ ಪಕ್ಷ ಸ್ಥಾಪಿಸುವ ಸಾಧ್ಯತೆ ಇದೆ. ಪೆಟ್ಟಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ರಜನಿ ಅವರ ಮುಂದಿನ ಚಿತ್ರ ದರ್ಬಾರ್ ಜನವರಿ 15, 2020ಕ್ಕೆ  ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಮೇಲೆ ಅಪ್ಪಳಿಸಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com