ಮೊಬೈಲ್ ನಲ್ಲೆ ನೋಡಬಹುದು ಕೆಜಿಎಫ್ ಸಿನಿಮಾ: ಇಂದಿನಿಂದ ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರ!

ರಾಕಿಂಗ್ ಸ್ಟಾರ್ ಯಶ್ ನಟಿಸಿದ ‘ಕೆಜಿಎಫ್’ ಪ್ರಪಂಚದಾದ್ಯಂತ ಭಾರೀ ಸದ್ದು ಮಾಡಿತ್ತು, ಕೆಜಿಎಫ್ ಸಿನಿಮಾವನ್ನು ಇಂದಿನಿಂದ ನಿಮ್ಮ ಮೊಬೈಲಿನಲ್ಲೇ ...
ಕೆಜಿಎಫ್ ಸಿನಿಮಾ ಪೋಸ್ಟರ್
ಕೆಜಿಎಫ್ ಸಿನಿಮಾ ಪೋಸ್ಟರ್
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟಿಸಿದ ‘ಕೆಜಿಎಫ್’ ಪ್ರಪಂಚದಾದ್ಯಂತ ಭಾರೀ ಸದ್ದು ಮಾಡಿತ್ತು,  ಕೆಜಿಎಫ್ ಸಿನಿಮಾವನ್ನು ಇಂದಿನಿಂದ ನಿಮ್ಮ ಮೊಬೈಲಿನಲ್ಲೇ ವೀಕ್ಷಿಸಬಹುದು. 
ಹಿಂದಿ ಹೊರತುಪಡಿಸಿ ಕೆಜಿಎಫ್ ಚಿತ್ರವನ್ನು ಅಮೆಜಾನ್ ಪ್ರೈಂನಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯಲ್ಲಿ ವೀಕ್ಷಿಸಬಹುದು.
ಅಮೆಜಾನ್ ಪ್ರೈಂ ವಿಡಿಯೋ ಭಾನುವಾರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಫೆಬ್ರವರಿ 5ರಂದು ಕೆಜಿಎಫ್ ಸಿನಿಮಾ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿತ್ತು. ಅಲ್ಲದೇ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿತ್ತು.
ಅಮೆಜಾನ್ ಪ್ರೈಂ ವಿಡಿಯೋ ಈ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ರೀ-ಟ್ವೀಟ್ ಮಾಡಲು ಶುರು ಮಾಡಿದ್ದರು. ಇದುವರೆಗೂ ಒಟ್ಟು 11 ಸಾವಿರಕ್ಕೂ ಹೆಚ್ಚು ರೀ-ಟ್ವೀಟ್ ಆಗಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಕೆಜಿಎಫ್ ಸಿನಿಮಾ ಕಳೆದ ವರ್ಷ ಡಿಸೆಂಬರ್ 21ರಂದು ಬಿಡುಗಡೆ ಆಗಿತ್ತು. ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿ ಸೂಪರ್ ಹಿಟ್ ಕಂಡಿದೆ. ಈ ಚಿತ್ರ ದೇಶ್ಯಾದ್ಯಂತ 2,400 ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com