ಪುಲ್ವಾಮಾ ದಾಳಿ: ಮಂಡ್ಯದ ಹುತಾತ್ಮ ಯೋಧನ ಕುಟುಂಬಕ್ಕೆ ಅರ್ಧ ಎಕರೆ ಭೂಮಿ ನೀಡಿದ ಸುಮಲತಾ

ಪುಲ್ವಾಮಾ ಉಗ್ರ ದಾಳಿಯಲಿ ಹುತಾತ್ಮನಾದ ರಾಜ್ಯದ ಯೋಧ ಎಚ್. ಗುರು ಅವರ ಕುಟುಂಬಕ್ಕೆ ನಟ, ರಾಜಕಾರಣಿ ಅಂಬರೀಶ್ ಪತ್ನಿ ಸುಮಲತಾ ಅರ್ಧ ಎಕರೆ ಭೂಮಿಯನ್ನು ನೀಡಲು ನಿರ್ಧರಿಸಿದ್ದಾರೆ.
ಪುಲ್ವಾಮಾ ದಾಳಿ: ಮಂಡ್ಯದ ಹುತಾತ್ಮ ಯೋಧನ ಕುಟುಂಬಕ್ಕೆ ಅರ್ಧ ಎಕರೆ ಭೂಮಿ ನೀಡಿದ ಸುಮಲತಾ
ಪುಲ್ವಾಮಾ ದಾಳಿ: ಮಂಡ್ಯದ ಹುತಾತ್ಮ ಯೋಧನ ಕುಟುಂಬಕ್ಕೆ ಅರ್ಧ ಎಕರೆ ಭೂಮಿ ನೀಡಿದ ಸುಮಲತಾ
Updated on: 
ಮಂಡ್ಯ: ಪುಲ್ವಾಮಾ ಉಗ್ರ ದಾಳಿಯಲಿ ಹುತಾತ್ಮನಾದ ರಾಜ್ಯದ ಯೋಧ ಎಚ್. ಗುರು ಅವರ ಕುಟುಂಬಕ್ಕೆ ನಟ, ರಾಜಕಾರಣಿ ಅಂಬರೀಶ್ ಪತ್ನಿ ಸುಮಲತಾ ಅರ್ಧ ಎಕರೆ ಭೂಮಿಯನ್ನು ನೀಡಲು ನಿರ್ಧರಿಸಿದ್ದಾರೆ. ಮಂಡ್ಯದಲ್ಲಿರುವ ತಮ್ಮ ಒಡೆತನದ ಜಮೀನಿನಲ್ಲಿ ಅರ್ಧ ಎಕರೆ ಭೂಮಿಯ್ಯನ್ನು ಯೋಧನ ಕುಟುಂಬಕ್ಕೆ ಹಸ್ತಾಂತರಿಸಲು ಅವರು ತೀರ್ಮಾನಿಸಿದ್ದಾರೆ.
"ಮಂಡ್ಯದ ಸೊಸೆಯಾಗಿರುವ ನನ್ನದು ದೇಶಕಾಲುವ ಯೋಧರಿಗಾಗಿ ಅಳಿಲುಸೇವೆ" ಎಂದಿರುವ ಸುಮಲತಾ ತಾವು ನೀಡಿದ ಭೂಮಿಯನ್ನು ಯೋಧ ಗುರುವಿನ ಕುಟುಂಬ ತಮ್ಮ ಜೀವನ ನಿರ್ವಹಣೆಗೆ ಬಳಸಿಕೊಳ್ಲಲಿ ಎಂದು ಆಶಿಸಿದ್ದಾರೆ.
ಸುಮಲತಾ ಅವರು ನೀಡಿದ ಭೂಮಿ ಉತ್ತಮ ನೀರಾವರಿ ಜಮೀನಾಗಿದ್ದು ಕೃಷಿ ಕಾರ್ಯಗಳಿಗೆ ಯೋಗ್ಯವಾಗಿದೆ.
ಪುತ್ರ ಅಭಿಷೇಕ್ ಅವರ "ಅಮರ್" ಚಿತ್ರದ ಶೂಟಿಂಗ್ ಗಾಗಿ ಅಮೇಷಿಯಾದಲ್ಲಿರುವ ಸುಮಲತಾ ಅಲ್ಲಿಂದಲೇ ವೀಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ."ನಾನು ಮಲೇಷಿಯಾದಲ್ಲಿದ್ದು ಗುರುವಿನ ಅಂತ್ಯಸಂಸ್ಕಾರಕ್ಕೆ ಆಗಮಿಸಲು ಆಗುತ್ತಿಲ್ಲ. ಸೋಮವಾರ ಇಲ್ಲವೇ ಮಂಗಳವಾರ ಭಾರತಕ್ಕೆ ಆಗಮಿಸಿದ ತಕ್ಷಣ ಗುರುವಿನ ಕುಟುಂಬವನ್ನು ಭೇಟಿಯಾಗುತ್ತೇನೆ. ತಮ್ಮ ಪತಿ ಅಂಬರೀಶ್ ಇಂದು ಇದ್ದಿದರೆ ಇದಕ್ಕಿಂತ ಹೆಚ್ಚಿನ ನೆರವು ನೀಡುತ್ತಿದ್ದರು" ಅವರು ಹೇಳಿದ್ದಾರೆ.
ಹುತಾತ್ಮ ಯೋಧ ಗುರುವಿನ ಕುಟುಂಬಕ್ಕೆ ಭೂಮಿ ಹಸ್ತಾಂತರಿಸುವ ಸಂಬಂಧ ಅಂಬರೀಶ್ ಅವರ ಅಣ್ಣನ ಮಗ ಮದನ್ ಅವರೊಡನೆ ಸುಮಲತಾ ಮಾತನಾಡಿದ್ದು ಈ ಕೂಡಲೇ ನೊಂದಣಿ ಮಾಡಿಸಿಕೊಡುವುದಕ್ಕೆ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com