ಹಿರಿಯ ನಟ ದಿವಂಗತ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಮರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಮೊದಲ ಟ್ರೈಲರ್ ಮಾರ್ಚ್ 1ರಂದು ಬಿಡುಗಡೆಯಾಗುತ್ತಿದೆ. ಅಂದು ದರ್ಶನ್ ನಟನೆಯ ಬಹು ನಿರೀಕ್ಷಿತ ಚಿತ್ರ ಯಜಮಾನ ಬಿಡುಗಡೆಯಾಗುತ್ತಿದೆ.
ನಾಗಶೇಖರ್ ನಿರ್ದೇಶನದ ಅಮರ್ ಚಿತ್ರದಲ್ಲಿ ದರ್ಶನ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕಿ ತನ್ಯಾ ಹೊಪೆ. ಅಮರ್ ಚಿತ್ರದ ಶೂಟಿಂಗ್ ಮುಗಿದಿದ್ದು ಕಲಾವಿದರ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.
ಕರ್ನಾಟಕ, ನೆರೆಯ ರಾಜ್ಯ ಸೇರಿದಂತೆ ಸ್ವಿಡ್ಜರ್ಲೆಂಡ್ ನಲ್ಲಿ ಕೂಡ ಶೂಟಿಂಗ್ ಆಗಿದೆ. ಚಿತ್ರದ ಹಾಡೊಂದರ ಚಿತ್ರೀಕರಣಕ್ಕೆ ಚಿತ್ರತಂಡ ಇತ್ತೀಚೆಗೆ ಮಲೇಷ್ಯಾಕ್ಕೆ ಹೋಗಿತ್ತು.