ಇಸ್ಲಾಮಾಬಾದ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಕೆಜಿಎಫ್, ಪಾಕಿಸ್ತಾನದಲ್ಲೂ ತೆರೆಕಂಡು ಭರ್ಜರಿ ಓಪನಿಂಗ್ ಕಂಡಿದೆ.
ಚಿತ್ರ ಬಿಡುಗಡೆಯಾದ ಮೊದಲ ದಿನ ಮೊದಲ ಪ್ರದರ್ಶನ ನೋಡಿದ ಪ್ರೇಕ್ಷಕರು ಕೆಜಿಎಫ್ ಚಿತ್ರಕ್ಕೆ ಫುಲ್ ಫಿದಾ ಆಗಿದ್ದು, ಪ್ರೇಕ್ಷಕರ ಪ್ರತಿಕ್ರಿಯೆಯ ವಿಡಿಯೋಗಳು ಇದೀಗ ಯೂಟ್ಯೂಬ್ ನಲ್ಲಿ ಭಾರಿ ಸುದ್ದಿ ಮಾಡುತ್ತಿವೆ.
ಕೆಲ ಪ್ರೇಕ್ಷಕರು ಖಾನ್ ತ್ರಯರ ಅಭಿಮಾನಿಗಳಾಗಿದ್ದರೂ, ಹೊಸ ನಟನ ಚಿತ್ರವೆಂದು ಒಮ್ಮೆ ನೋಡಿ ಹೋಗೋಣ ಎಂದು ಚಿತ್ರ ಮಂದಿರಕ್ಕೆ ಬಂದಿದ್ದಾರೆ. ಚಿತ್ರ ನೋಡಿ ಫುಲ್ ಖುಷಿಯಾಗಿ ಮತ್ತೊಮ್ಮೆ ಚಿತ್ರ ವೀಕ್ಷಿಸಲು ಆಗಮಿಸುತ್ತೇನೆ ಎಂದು ಹೇಳಿದ್ದಾರೆ.
ಅಂತೆಯೇ ಮತ್ತೆ ಕೆಲವರು ಚಿತ್ರದ ನಿರ್ದೇಶನ, ಸಂಭಾಷಣೆ, ಆ್ಯಕ್ಷನ್ ಸೀನ್ ಗಳನ್ನು ಇಷ್ಟಪಟ್ಟಿದ್ದು, ಮತ್ತೆ ಕೆಲವರು ಚಿತ್ರದ ಛಾಯಾಗ್ರಹಣವನ್ನು ಇಷ್ಟಪಟ್ಟಿದ್ದಾರೆ. ಚಿತ್ರಕಥೆ ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದು, ಕೆಜಿಎಫ್ ಚಾಪ್ಟರ್ 2 ವೀಕ್ಷಣೆಗೆ ಕಾತುರರಾಗಿದ್ದೇವೆ ಎಂದು ಹೇಳಿದ್ದಾರೆ.