ದುರ್ಗದ ಹುಲಿ ಸಿನಿಮಾದಿಂದ ನಟ ಸುದೀಪ್ ಹಿಂದೆ ಸರಿಯಲು ಕಾರಣವೇನು?

18ನೇ ಶತಮಾನದ ಐತಿಹಾಸಿಕ ಕಥೆ ಆಧರಿಸಿ ಮದಕರಿ ನಾಯಕ ಸಿನಿಮಾ ತಯಾರಾಗುತ್ತಿದೆ, ದರ್ಶನ್ ನಟನೆಯ ಈ ಸಿನಿಮಾ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ...
ಸುದೀಪ್
ಸುದೀಪ್
Updated on
18ನೇ ಶತಮಾನದ ಐತಿಹಾಸಿಕ ಕಥೆ ಆಧರಿಸಿ ಮದಕರಿ ನಾಯಕ ಸಿನಿಮಾ ತಯಾರಾಗುತ್ತಿದೆ, ದರ್ಶನ್ ನಟನೆಯ ಈ ಸಿನಿಮಾ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಗಂಡುಗಲಿ ಮದಕರಿ ನಾಯಕ ಸಿನಿಮಾಗಾಗಿ ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದ್ದಾರೆ, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್  ನಿರ್ಮಾಣ ಮಾಡುತ್ತಿದ್ದಾರೆ,
ಇನ್ನೂ ಇದೇ ರೀತಿಯ ಕಥೆ ಹೊಂದಿರುವ ದುರ್ಗದ ಹುಲಿ ಸಿನಿಮಾದಿಂದ ನಟ ಸುದೀಪ್ ಹಿಂದೆ ಸರಿದಿದ್ದಾರೆ, ನಿರ್ದೇಶಕರು ಹಾಗೂ ನಿರ್ಮಾಪಕರ ಜೊತೆ ಚರ್ಚಿಸಿ ಸಿನಿಮಾದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ,
ಸುದೀಪ್ ಸದ್ಯ ಹೈದರಾಬಾದ್ ನಲ್ಲಿ  ಸೈ ರಾ ನರಸಿಂಹ ರೆಡ್ಡಿ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ನನ್ನ ಪ್ರಕಾರ ಮದಕರಿ ನಾಯಕ ಮತ್ತು ದುರ್ಗದ ಹುಲಿ ಸಿನಿಮಾ ಎರಡು ಕಥೆಗಳು ಒಂದೆಯಾಗಿವೆ, ಒಂದೇ ತಟ್ಟೆಯಲ್ಲಿ  ಒಂದೇ ರೀತಿಯ ಊಟವನ್ನು ಬಡಿಸಿದಂತಾಗುತ್ತದೆ ಎಂದು ಸುದೀಪ್ ಹೇಳಿದ್ದಾರೆ,
ರಾಕ್ ಲೈನ್ ವೆಂಕಟೇಶ್ ಅವರನ್ನು ನಾನು ಹಲವು ವರ್ಷಗಳಿಂದ ನೋಡಿದ್ದೇನೆ,ರಾಜೇಂದ್ರ ಸಿಂಗ್ ಬಾಬು  ಹಲವು ಸಿನಿಮಾ ನಿರ್ದೇಶಿಸಿದ್ದಾರೆ. ದರ್ಶನ್ ನಟನೆಯ ಗಂಡುಗಲಿ ಮದಕರಿ ನಾಯಕ ಸಿನಿಮಾಗಾಗಿ ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com