ಫೆ.1ಕ್ಕೆ 'ಬಜಾರ್' ಬಿಡುಗಡೆ

ಸಂಕ್ರಾಂತಿ ವೇಳೆಗೆ ಬಿಡುಗಡೆಯಾಗಬೇಕಿದ್ದ ನಿರ್ದೇಶಕ ಸುನಿಯವರ ಬಜಾರ್ ಚಿತ್ರ ಇದೀಗ ಫೆಬ್ರವರಿ 1ಕ್ಕೆ ...
ಬಜಾರ್ ನಲ್ಲಿ ಧನ್ ವೀರ್
ಬಜಾರ್ ನಲ್ಲಿ ಧನ್ ವೀರ್

ಸಂಕ್ರಾಂತಿ ವೇಳೆಗೆ ಬಿಡುಗಡೆಯಾಗಬೇಕಿದ್ದ ನಿರ್ದೇಶಕ ಸುನಿಯವರ ಬಜಾರ್ ಚಿತ್ರ ಇದೀಗ ಫೆಬ್ರವರಿ 1ಕ್ಕೆ ಬಿಡುಗಡೆಯಾಗುತ್ತಿದೆ.

ಚಿತ್ರದಲ್ಲಿ ಪಾರಿವಾಳವನ್ನು ಬಳಸಲಾಗಿದೆ ಎಂದು ಪ್ರಾಣಿದಯಾ ಸಂಘಟನೆಯಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಚಿತ್ರಕ್ಕೆ ಪ್ರಾಣಿ ಅಭಿವೃದ್ಧಿ ಮಂಡಳಿಯಿಂದ ಅನುಮತಿ ಪತ್ರ ಸಿಕ್ಕಿದ್ದು ಸೆನ್ಸಾರ್ ನಿಂದಲೂ ಯು/ ಎ ಸರ್ಟಿಫಿಕೇಟ್ ಸಿಕ್ಕಿದೆ.

ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಚಿತ್ರದಿಂದ ಖ್ಯಾತಿ ಗಳಿಸಿದ ನಿರ್ದೇಶಕ ಸುನಿ ಮಾಸ್ ಪ್ರೇಕ್ಷಕನಿಗೆ ಇಷ್ಟವಾಗುವಂತಹ ಬಜಾರ್ ಚಿತ್ರ ಸಿದ್ದಪಡಿಸಿದ್ದಾರೆ. ಇದಕ್ಕೆ ರವಿ ಬಸ್ರೂರು ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದ್ದು ಅದಿತಿ ಪ್ರಭು ಮತ್ತು ದನ್ ವೀರ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com