ದಿವಂಗತ ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ದಢಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದು ಮೊದಲ ಚಿತ್ರದಲ್ಲಿಯೇ ಭರವಸೆ ನಟಿಯಾಗಿ ಹೊರಹೊಮ್ಮಿದ್ದರು. .ಇನ್ನು ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಛಾಯಾಗ್ರಾಹಕನೊಬ್ಬ ಜಾಹ್ನವಿ ಕಾಲೆಳೆದು ಮುಜುಗರವನ್ನುಂಟು ಮಾಡಲು ಯತ್ನಿಸಿದ್ದಾನೆ. ಎಲ್ಲರೆದುರೇ ಜಾಹ್ನವಿ ಅಂತ ಕರೆಯುವುದನ್ನು ಬಿಟ್ಟು ಸೈಫ್ ಅಲಿಖಾನ್ ಪುತ್ರಿ ಸಾರಾ ಎಂದು ಕೂಗಿ ಕರೆದಿದ್ದಾನೆ..ಇದಕ್ಕೆ ಜಾಹ್ನವಿ ಕಪೂರ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ನಗುತ್ತಲೆ ಮುಂದೆ ಹೋಗಿದ್ದು, ಅಲ್ಲದೆ ಅವರು ಬೇಕಂತಲೇ ಹೀಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ. .ಸಾರಾ ಅಲಿಖಾನ್ ಹಾಗೂ ಜಾಹ್ನವಿ ಏಕಕಾಲದಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಸಾರಾ ಕೇದಾರನಾಥ್ ಹಾಗೂ ಸಿಂಬಾ ಚಿತ್ರದಲ್ಲಿ ನಟಿಸಿದ್ದಾರೆ..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos